ಬಿಗ್‌ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ರಜತ್ ಘರ್ಜನೆ ಜೋರಾಗಿದೆ. ಅವರ ಕೂಗಾಟಕ್ಕೆ ಮನೆ ಮಂದಿಯೆಲ್ಲಾ ಸೈಲೆಂಟ್ ಆಗಿದ್ದಾರೆ. ಅವರು ಹಾಕುವ ಸವಾಲಿಗೆ ಮನೆಯ ಸ್ಪರ್ಧಿಗಳು ಗಪ್ ಚುಪ್ ಆಗಿದ್ದಾರೆ. ಎಸ್, ಬಿಗ್ ಬಾಸ್ ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ರಜತ್ ತಮ್ಮ ಮತಿನಿಂದಲೇ ಹೆಚ್ಚು ಸುದ್ದಿ ಅಲ್ಲಿದ್ದಾರೆ.
ನಾಮಿನೇಷನ್ ಪ್ರಕ್ರಿಯೆ ವೇಳೆ ರಜತ್ ಅವರು ಚೈತ್ರಾ ಅವರನ್ನು ಬಾಸ್ ಎಂದೇ ಮಾತನಾಡಿಸಿದರು. ಬಿಗ್ ಬಾಸ್ ಮನೆಯಲ್ಲಿ ಇರೋರಿಗೆ ಕೆಲವೊಮ್ಮೆ ನಾಮನೇಷನ್‌ಗೆ ಕಾರಣವೇ ಸಿಗೋದಿಲ್ಲ. ಹಾಗೆ ರಜತ್ ಕಿಶನ್ ತಮಾಷೆಗೆ ಹೇಳಿದ ಆ ಒಂದು ಮಾತನ್ನ ಚೈತ್ರಾ ಕುಂದಾಪುರ ನಾಮಿನೇಷನ್‌ಗೆ ಬಳಸಿಕೊಂಡರು.
ರಜತ್ ಆಡುವ ಮಾತುಗಳು ತುಂಬ ಒರಟಾಗಿ ಇರುತ್ತವೆ. ಹಾಗಾಗಿ ಮಾತಿನ ಮೂಲಕ ಫೈಟ್ ಮಾಡಲು ಕೂಡ ಚೈತ್ರಾ ಕುಂದಾಪುರ ಅವರಿಗೆ ಕಷ್ಟ ಆಗುತ್ತಿದೆ. ನವೆಂಬರ್ 27ರ ಸಂಚಿಕೆಯಲ್ಲಿ ಅವರಿಬ್ಬರು ಜಗಳ ಮಾಡಿಕೊಂಡಿದ್ದಾರೆ.
ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರಾ ಕುಂದಾಪುರ ಅವರು ಸರಿಯಾದ ಕಾರಣಗಳನ್ನು ನೀಡಿಲ್ಲ ಎಂದು ರಜತ್ ಅವರು ಅಸಮಾಧಾನಗೊಂಡಿದ್ದಾರೆ. ಆದರೆ ತಮ್ಮ ಕಾರಣಗಳು ಸರಿ ಇದೆ ಚೈತ್ರಾ ಅವರು ವಾದ ಮಾಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರಿದಿದೆ. ದ್ವೇಷ ಹೆಚ್ಚಾಗುತ್ತಿದೆ. ಒಬ್ಬರ ಕಣ್ಣಿನಲ್ಲಿ ಇನ್ನೊಬ್ಬರು ದುಷ್ಮನ್ಗಳಾಗಿದ್ದಾರೆ.
ನನಗೆ ಚೆನ್ನಾಗಿ ಗೊತ್ತು. ತಾಯತ ಎಲ್ಲಿ ಕಟ್ಟಿಸಬೇಕೋ ಅಲ್ಲಿ ಕಟ್ಟಿಸುತ್ತೇನೆ’ ಎಂದು ಚೈತ್ರಾ ಕುಂದಾಪುರ ಅವರು ಶತಪ ಮಾಡಿದ್ದಾರೆ. ಅವರ ಈ ಬೆದರಿಕೆಯ ಮಾತುಗಳಿಗೆ ರಜತ್ ಬಗ್ಗಿಲ್ಲ. ಅವರು ಕೂಡ ಜೋರಾಗಿಯೇ ಜಗಳಕ್ಕೆ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಬ್ಬರ ನಡುವಿನ ಜಗಳ ಇನ್ನಷ್ಟು ಜೋರಾಗುವ ಸಾಧ್ಯತೆ ಇದೆ. ಎಲ್ಲ ಸಂದರ್ಭದಲ್ಲಿಯೂ ಇಬ್ಬರ ಮಧ್ಯೆ ವಿರೋಧ ಬೆಳೆಯುತ್ತಿದೆ.
ದೈಹಿಕ ಬಲ ಅಗತ್ಯ ಇರುವ ಟಾಸ್ಕ್ನಲ್ಲಿ ಚೈತ್ರಾ ಅವರು ಸರಿಯಾಗಿ ಆಡುವುದಿಲ್ಲ ಎಂಬ ಅಭಿಪ್ರಾಯ ರಜತ್ ಅವರಿಗೆ ಇದೆ. ಅದೇ ರೀತಿ, ಕೇವಲ ದೈಹಿಕ ಬಲದಿಂದ ಬಿಗ್ ಬಾಸ್ ಆಡಲು ಸಾಧ್ಯವಿಲ್ಲ, ತಂತ್ರಗಾರಿಕೆ ಕೂಡ ಮುಖ್ಯ ಎಂಬುದು ಚೈತ್ರಾ ವಾದವೀಗಿದೆ.