Bigg Boss: ಕೊನೆಗೂ ಕ್ಯಾಪ್ಟನ್ ಆದ ಧನು: ಕೊನೆಗೂ ಸ್ನೇಹಿತನ ಮಾತು ನಿಜವಾಗೋಯ್ತು!

Share to all

ಬಿಗ್ ಬಾಸ್‌’ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್ ನಡೆದಿದೆ. ಅದರಲ್ಲಿ ಧನರಾಜ್ ಆಚಾರ್ ಅವರು ವಿನ್ನರ್ ಆಗಿದ್ದಾರೆ. ಮೊದಲ ಬಾರಿಗೆ ಬಿಗ್ ಬಾಸ್ ಮನೆಯ ಹಿಡಿತವನ್ನು ಪಡೆದುಕೊಂಡಿದ್ದಾರೆ. ಆದರೆ ಇದಕ್ಕೆ ಧನುಗೆ ಹನುಮಂತು ನೀಡಿದ ಪ್ರೋತ್ಸಾಹದ ಮಾತುಗಳು ಕೂಡ ಕಾರಣ ಎಂದರೆ ತಪ್ಪಿಲ್ಲ.

ಬಿಗ್ ಬಾಸ್’ ಮನೆಯಲ್ಲಿ ಮಹಾರಾಜ ಮತ್ತು ಯುವರಾಣಿ ಟಾಸ್ಕ್‌ ಮುಕ್ತಾಯವಾಗಿ, ಅದರಲ್ಲಿ ಮಂಜಣ್ಣ ಟೀಮ್ ಗೆದ್ದಿದೆ ಎಂಬ ಘೋಷಣೆ ಮಾಡಲಾಯಿತು. ಆಗ ಕ್ಯಾಪ್ಟನ್ಸಿ ಓಟಕ್ಕೆ ಸೆಲೆಕ್ಟ್ ಆದವರು ಮಂಜು, ಗೌತಮಿ, ಸುರೇಶ್‌, ಭವ್ಯಾ, ಧನರಾಜ್ ಆಚಾರ್, ಐಶ್ವರ್ಯಾ. ಈ ವಿಚಾರ ತಿಳಿದ ಹನುಮಂತ, ಧನರಾಜ್‌ಗೆ ಮಾನಸಿಕ ಸ್ಥೈರ್ಯ ತುಂಬಿದರು. ಜೊತೆಗೆ, “ಕ್ಯಾಪ್ಟನ್ ಆಗೋ ಸೂಚನೆ ಇದೆ” ಎಂದು ಧನರಾಜ್‌ಗೆ ಹೇಳಿದರು.

ಬಿಗ್ ಬಾಸ್ ಕನ್ನಡ ಸೀಸನ್ 11 ಹತ್ತನೇ ವಾರದತ್ತ ಸಾಗುತ್ತಿದೆ. ಒಬ್ಬೊಬ್ಬರಿಗೂ ಗೆಲ್ಲುವ ಹಠ ಹೆಚ್ಚಾಗಿದೆ. ಒಬ್ಬೊಬ್ಬರೇ ಮನೆಯಿಂದ ಖಾಲಿಯಾಗುತ್ತಿದ್ದಾರೆ. ಇನ್ನು ಉಳಿದಿರುವುದು ಕೆಲವು ದಿನಗಳು ಮಾತ್ರ. ಈ ಕೆಲವು ದಿನಗಳಲ್ಲಿ ಯಾರೂ ಉಳಿದುಕೊಳ್ಳುತ್ತಾರೆ ಅನ್ನೋದೆ ಮುಖ್ಯವಾಗುತ್ತದೆ. ನಾಮಿನೇಷನ್, ಎಲಿಮೇಮಿನೇಷನ್ ಎಷ್ಟು ಟಫ್ ಆಗುತ್ತಾ ಹೋಗುತ್ತದೆಯೋ ಆಟ ಕೂಡ ಅಷ್ಟೇ ಸ್ಟ್ರಾಂಗ್ ಆಗುತ್ತಾ ಹೋಗುತ್ತದೆ.

60ನೇ ದಿನ್ಕಕೆ ಕಾಲಿಟ್ಟ ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಕ್ಯಾಪ್ಟನ್ ಆಗಿದ್ದಾರೆ.

ಈ ವಾರ ಇಡೀ ಮನೆ ಬಿಗ್​ಬಾಸ್ ಸಾಮ್ರಾಜ್ಯವಾಗಿ ಬದಲಾಗಿ ಬಿಟ್ಟಿತ್ತು. ಮಹಾರಾಜ ಮಂಜಣ್ಣ ಹಾಗೂ ಯುವರಾಣಿ ಮೋಕ್ಷಿತಾ ತಂಡ ನಡುವೆ ಬಿಗ್​ ಫೈಟ್​ ನಡೆದಿತ್ತು. ಕೊನೆಯ ಹಂತದಲ್ಲಿ ಮಹಾರಾಜ ಮಂಜಣ್ಣ ತಂಡ ಈ ವಾರದ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದರು. ​ಅದರಲ್ಲೂ ಮೋಕ್ಷಿತಾ ಅವರು ಕ್ಯಾಪ್ಟನ್ಸಿ ಓಟದಿಂದ ತ್ರೀವಿಕ್ರಮ್​ ಅವರನ್ನು ಆಚೆಗೆ ಇಟ್ಟಿದ್ದರು. ಅವರನ್ನು ಹೊರತುಪಡಿಸಿ ಮಂಜು, ಐಶ್ವರ್ಯ, ಭವ್ಯಾ, ಧನರಾಜ್​, ಗೌತಮಿ ಹಾಗೂ ಗೋಲ್ಡ್​ ಸುರೇಶ್ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾದ್ದರು

ಈ ಆರು ಮಂದಿಗೆ ಬಿಗ್​ಬಾಸ್​ ಟಾಸ್ಕ್​ವೊಂದನ್ನು ನೀಡಿದ್ದಾರೆ. ಕ್ಯಾಪ್ಟನ್ಸಿ ಆಡುವ 6 ಅಭ್ಯಾರ್ಥಿಗಳು ಅಂತಿಮ ಸ್ಥಾನದಲ್ಲಿ ತಮಗೆ ಮಿಸಲಿರುವ ಜಾಗದಲ್ಲಿ ನಿಲ್ಲಬೇಕು. ಟಾಸ್ಕ್​ ಆರಂಭವಾದ ಕೂಡಲೇ ಆರಂಭಿಕ ಸ್ಥಾನದಲ್ಲಿರೋ ಸದಸ್ಯರು ಒಂದು ಹಿಡಿಕೆಯನ್ನು ತೆಗೆದುಕೊಂಡು, ಲೋಟದಲ್ಲಿ ನೀರು ತುಂಬಿಸಿ, ಲೋಟವನ್ನು ಹಿಡಿಕೆಯ ಮೇಲ್ಭಾದಲ್ಲಿರುವ ತಟ್ಟೆಯಲ್ಲಿ ಇಡಬೇಕು. ನಂತರ ನೀರಿನ ಲೋಟ ಕೆಳಗೆ ಬಿಳದಂತೆ ಕ್ಯಾಪ್ಟನ್ಸಿ ಆಟದಿಂದ ಹೊರಗಡೆ ಹಾಕುವ ಅಭ್ಯರ್ಥಿಯ ಬುಟ್ಟಿಗೆ ನೀರು ಹಾಕಬೇಕು. ಯಾವ ಸ್ಪರ್ಧಿಯ ಬುಟ್ಟಿಯಲ್ಲಿ ಜಾಸ್ತಿ ನೀರು ಇರುತ್ತದೆ ಅವರು ಈ ಓಟದಿಂದ ಹೊರಗಡೆ ಉಳಿಯುತ್ತಾರೆ.

ಇದೇ ಟಾಸ್ಕ್​ನಲ್ಲಿ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ಕಾಲಿ ಬುಟ್ಟಿಗೆ ನೀರು ಹಾಕಿ ಅವರನ್ನು ಔಟ್ ಮಾಡಿದ್ದಾರೆ. ಈ ವೇಳೆ ಸ್ಪರ್ಧಿಗಳು ಪ್ಲಾನ್​ ಮಾಡಿ ಧನರಾಜ್​ ಅವರ ಬುಟ್ಟಿಗೆ ನೀರು ಹಾಕದೇ ಹಾಗೇ ಬಿಟ್ಟಿದ್ದಾರೆ. ಹೀಗಾಗಿ ಧನರಾಜ್ ಆಚಾರ್ಯ ಅವರು ಈ ಟಾಸ್ಕ್​ನಲ್ಲಿ ಗೆದ್ದು ಬಿಗಿದ್ದಾರೆ. ಹಾಗೂ ಕ್ಯಾಪ್ಟನ್ ಆಗಿದ್ದಾರೆ.


Share to all

You May Also Like

More From Author