ದಣಿವರಿಯದ ದಂಡಪ್ಪನವರಿಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ.
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿರುವ ಶ್ರೀಧರ ದಂಡಪ್ಪನವರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವೈದ್ಯರಾದರೆ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟ ವೈದ್ಯಾಧಿಕಾರಿ ಶ್ರೀಧರ ದಂಡಪ್ಪನವರ ಸೇವೆಯನ್ನ ಗುರುತಿಸಿದ ಮಹಾನಗರ ಪಾಲಿಕೆ ಇಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮೇಯರ್ ರಾಮಪ್ಪ ಬಡಿಗೇರ ಹಾಗೂ ಪಾಲಿಕೆಯ ಆಯುಕ್ತ ಡಾ: ಉಳ್ಳಾಗಡ್ಡಿ ಅವರು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.
ಡಾಕ್ಟರ್ ದಂಡಪ್ಪನವರ ಎಂದರೆ ಸಾಕು ಮಹಾನಗರ ಪಾಲಿಕೆ ಮತ್ತು ಚಿಟಗುಪ್ಪಿ ಆಸ್ಪತ್ರೆಯಲ್ಲಿ ಅವರನ್ನು ಬೈಯುವರೇ ಹೆಚ್ಚು.ಕಾರಣ ಇಷ್ಟೇ ಕೆಲಸದ ವಿಷಯ ಅಂತಾ ಬಂದರೆ ಯಾರ ಮುಲಾಜು ಕಾಯೋದಿಲ್ಲಾ ದಂಡಪ್ಪನವರ.ಅಂತಗ ಅಧಿಕಾರಿಯನ್ನು ಇವತ್ತು ಪಾಲಿಕೆ ಗುರುತಿಸಿ ಪ್ರಶಸ್ತಿ ನೀಡಿದೆ.
ಇದೇ ಸಂದರ್ಭದಲ್ಲಿ ಮಾತನಾಡಿದ ವೈದ್ಯಾಧಿಕಾರಿ ಶ್ರೀಧರ ದಂಡಪ್ಪನವರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ ತುಂಬಾ ಸಂತೋಷ .ಆದರೆ ಪ್ರಶಸ್ತಿಯ ಜೊತೆಗೆ ನನಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ ಅಂತಾ ಹೇಳಿದ್ದಾರೆ.