ರಾಮ ಜನ್ಮಭೂಮಿ ಹೋರಾಟಗಾರ ಬಂಧನ ವಿಚಾರ.
ಬಂಧಿತ ಶ್ರೀಕಾಂತ್ ಪೂಜಾರಿ ಮನೆಗೆ ಹುಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಭೇಟಿ.
ಹುಬ್ಬಳ್ಳಿ:- ರಾಮಜನ್ಮ ಭೂಮಿ ಹೋರಾಟಗಾರ ಶ್ರೀಕಾಂತ ಪೂಜಾರಿ ಬಂಧನ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪಾಂಡುರಂಗ ಕಾಲೋನಿ ಯಲ್ಲಿರೋ ಶ್ರೀಕಾಂತ್ ಪೂಜಾರಿ ಮನೆಗೆ ಭೇಟಿ ನೀಡಿದ ಶಾಸಕ ಟೆಂಗಿನಕಾಯಿ
ಕುಟುಂಬಸ್ಥರೊಂದಿಗೆ ಮಾಹಿತಿ ಪಡೆದುಕೊಂಡರು.
ಶುಕ್ರವಾರ ಏಕಾಏಕಿ ಪೋಲೀಸರು ಕರೆದುಕೊಂಡು ಹೋಗಿದ್ದಾರೆ ಎಂದು ಶ್ರೀಕಾಂತ್ ಪೂಜಾರಿ ಪುತ್ರ ಮಂಜುನಾಥ್ ಹೇಳಿದರು ಅಲ್ಲದೇ
ಅವರ ಎರಡು ಕೈ ಆಪರೇಶನ್ ಆಗಿದೆ ಎಂದು ಕುಟುಂಬಸ್ಥರು ನೋವು ತೋಡಿಕೊಂಡರು.
ಕೋರ್ಟ್ ವಿಚಾರ ನಾವೆಲ್ಲ ನೋಡಕೋತಿವಿ ಎಂದ ಮಹೇಶ್ ಟೆಂಗಿನಕಾಯಿ..
ನಿಮಗೆ ಯಾವದೇ ಮಾಹಿತಿ ಹೇಳಿಲ್ವಾ ಎಂದು ಕೇಳಿದರು
ಇಲ್ಲ ಯಾವ ಮಾಹಿತಿ ಇಲ್ಲದೆ ಕರೆದುಕೊಂಡು ಹೋಗಿದ್ದಾರೆಂದ ಶ್ರೀಕಾಂತ್ ಕುಟುಂಬಸ್ಥರು ಹೇಳಿದರು.
ಹುಬ್ಬಳ್ಳಿಯ ಪೊಲೀಸರು ಕಳೆದ ಶುಕ್ರವಾರವೇ ಶ್ರೀಕಾಂತ್ ನನ್ನ ಬಂಧಿಸಿದ್ದಾರೆ.1992 ಡಿಸೆಂಬರ್ 5 ರಂದು ನಡೆದ ರಾಮಜನ್ಮಭೂಮಿ ಹೋರಾಟದ ವಿಚಾರವಾಗಿ ಅರೆಸ್ಟ್ ಮಾಡಿರೋ ಪೊಲೀಸರು.
ಉದಯ ವಾರ್ತೆ ಹುಬ್ಬಳ್ಳಿ