ಶೆಟ್ಟರ್ ಬೀಗರಿಗೆ ಬಿಜೆಪಿ ಆಪರೇಶನ್. ಶೀಘ್ರದಲ್ಲಿ ರಾಜಕೀಯ ಬಹುದೊಡ್ಡ ಬೆಳವಣಿಗೆ.
ಹುಬ್ಬಳ್ಳಿ : ಜನಸಂಘದ ಕಟ್ಟಾಳು ಬಿಜೆಪಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರಲು ನೆರವಾಗಿದ್ದ ಅವರ ಬೀಗರು ಶೀಘ್ರದಲ್ಲೇ ಬಿಜೆಪಿ ಪಕ್ಷ ಸೇರಲಿದ್ದಾರೆ ಎನ್ನುವ ಬಿಗ್ ಸ್ಟೋರಿ ಇದೀಗ ಸಂಚಲನ ಮೂಡಿಸುತ್ತಿದೆ.
ಕೆಲ ದಿನಗಳ ಹಿಂದೆ ಅಷ್ಟೇ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಪಕ್ಷ ಸೇರಿದ್ದರು ಇದೀಗ ಪಕ್ಷಕ್ಕೆ ರಿಟರ್ನ್ ಗಿಫ್ಟ್ ಎನ್ನುವಂತೆ ಕಾಂಗ್ರೆಸ್ ಪಕ್ಷದ ಬೆನ್ನೆಲುಬು ಎಂದು ಗುರುತಿಸಿಕೊಂಡಿರುವ ಸಚಿವರ ಕುಟುಂಬಸ್ಥರ ಶಾಸಕರನ್ನು ಆಪರೇಶನ್ ಮಾಡುವುದು ಪಕ್ಕಾ ಎನ್ನಲಾಗಿದೆ
ಮೂಲಗಳ ಮಾಹಿತಿ ಪ್ರಕಾರ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಾಳಯ ಸೇರಿರುವ ಲಿಂಗಾಯತ ಮತ ಬ್ಯಾಂಕ ಮತ್ತೆ ಬಿಜೆಪಿಗೆ ಸೆಳೆಯುವ ನಿಟ್ಟಿನಲ್ಲಿ ನೂತನ ರಾಜ್ಯಾಧ್ಯಕ್ಷರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು ಇದೀಗ ದೊಡ್ಡ ಮಟ್ಟದ ಸಾಹಸಕ್ಕೆ ಕೈ ಹಾಕಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷದ ಪ್ರಮುಖ ಲಿಂಗಾಯತ ಮುಖಂಡರನ್ನು ಬಿಜೆಪಿಗೆ ಸೆಳೆಯಲು ತೆರೆಮರೆಯ ಪ್ರಯತ್ನ ನಡೆಯುತ್ತಿದ್ದು ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.