ಇನ್ ಸ್ಟಾಗ್ರಾಂ ಒಂದು ಗೂಡಿಸಿತು ಆ ಇಬ್ಬರು ಮೂಕ ಪ್ರೇಮಿಗಳನ್ನ.ಮುಂದೆ ಮದುವೆನೂ ಆಯಿತು. ಮದುವೆ ಆದ ಮೂರೇ ದಿನದಲ್ಲಿ ಆಯಿತು ಎಡವಟ್ಟು.
ಬಾಗಲಕೋಟೆ:- ಹೌದು ಆ ಇಬ್ಬರು ಪ್ರೆಮಿಗಳು ಒಂದು ದಿನವೂ ಒಬ್ಬರಬ್ಬೊರನ್ನು ನೋಡಲಿಲ್ಲಾ.ಮಾತನಾಡಲಿಲ್ಲಾ.ಆದರೂ ಮನಸು ಮನಸುಗಳು ಒಂದಾಗಿದ್ದವು.ಅದು ಇನಸ್ಟಾಗ್ರಾಂ ಮೂಲಕ.ಹೀಗೆ ಒಂದಾ ಜೋಡಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಾಗನೂರ ಗ್ರಾಮದ ಸಿದ್ಧಾರ್ಥ ಮತ್ತು ರಾಜಸ್ಥಾನದ ರಾಜಸುಮಂತ ಜಿಲ್ಲೆಯ ರೊದಿಯಾ ಮದುವೆಯೂ ಆಗಿದ್ದರು.
ಮಾತು ಬಾರದ ಮೂಕ ಪ್ರೇಮಿಗಳಿಬ್ಬರು ಮದುವೆಯಾಗಿ ಮೂರು ದಿನ ಕಳೆದಿರಲಿಲ್ಲಾ.ಹುಡುಗಿಯ ಕಡೆಯವರು ರಾಜಸ್ಥಾನದಿಂದ ಬಂದು ಹುಡಿಗಿಯನ್ನು ಕರೆದುಕೊಂಡು ಹೋಗಿದ್ದಾರೆ.
ಹುಡುಗ ಸಿದ್ದಾರ್ಥ ಈಗ ನಾಲ್ಕು ಗೋಡೆಗಳ ಮದ್ಯೆ ಹುಡುಗಿಯ ನೆನಪಲ್ಲಿ ಮೂಕ ರೋಧನೆ ಅನುಭವಿಸುತ್ತಿದ್ದಾನೆ.ಕುರುಡು ಪ್ರೀತಿಗೆ ಮೂಕ ಪ್ರೇಮಿಗಳು ಈಗ ಬೇರೆ ಬೇರೆಯಾಗಿದ್ದಾರೆ.