ಧಾರವಾಡ.
ಮೃತ ಯೋಗೀಶ್ ಗೌಡ ಕೊಲೆ ಕೇಸ್ ಪ್ರಕರಣದಲ್ಲಿ ಡಿವಾಯ್ ಎಸ್ ಪಿ ಸುಲ್ಪಿ ನಮ್ಮನ್ನು ಎನ್ ಕೌಂಟರ್ ಮಾಡ್ತೇನಿ ಅಂತಾ ಬೆದರಿಕೆ ಹಾಕಿದ್ದರು ಎಂದು ಮ್ರತ ಯೋಗೀಶಗೌಡ ಸಹೋದರ ಗುರುನಾಥಗೌಡ ಹೇಳಿದ್ದಾರೆ.
ಈಗಾಗಲೆ ಜನಪ್ರತಿನಿಧಿ ಕೋರ್ಟ ನಮ್ಮ ಪರ ಆದೇಶ ಮಾಡಿದೆ.ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ 195 ಎ ಕೇಸನ್ನ ಬಿ ಪಾಲ್ಸ್ ಎಂದು ಮಾಡಿದ್ದರು.ಅವರದ್ದೆ ಸರಕಾರ ಅವರದ್ದೆ ಸಚಿವರು ಇದ್ದರು ಅದಕ್ಕೆ ಕೇಸ್ ದಾರಿ ತಪ್ಪಿಸಿದ್ದರು.
ಅದನ್ನ ಪ್ರಶ್ನಿಸಿ ನಾನು ಹೈಕೋರ್ಟ ಮೋರೆ ಹೋಗಿದ್ದೆ.
ಹೈಕೋರ್ಟ ನ ಪ್ರಕಾರ ನಾವು ಮತ್ತೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೊರೆ ಹೋಗಿದ್ದೆ.ನಮ್ಮ ವಕೀಲರು ವಾದ ಮಾಡಿ ನ್ಯಾಯ ಕೊಡಸಿದ್ದಾರೆ.ಎಲ್ಲ ಸಾಕ್ಷಿ ದಾಖಲೆಗಳು ಇದ್ರು ಪ್ರಕರಣದ ದಾರಿ ತಪ್ಪಿಸಿದ್ದರು ಆಗಿನ ಪೋಲಿಸ್ ಅಧಿಕಾರಿಗಳು.
ಸದ್ಯ ಸೆಪ್ಡಂಬರ್ 27 ಕ್ಕೆ ಜನಪ್ರತಿನಿಧಿಗಳ ಕೋರ್ಟ ಆದೇಶ ಮಾಡಿದೆ.ಮರು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಕೋಟ್೯ ಆದೇಶ ಮಾಡಿದೆ.
ಇವತ್ತು ಕಾಂಗ್ರೆಸ್ ಸರಕಾರ ಇದೆ
ಸರಿಯಾಗಿ ತನಿಖೆ ಮಾಡಿ ಸಿಬಿಐಗೆ ಈ ಪ್ರಕರಣವನ್ನ. ವಹಿಸಬೇಕು.ನಮಗೆ ನ್ಯಾಯ ಸಿಗುತ್ತೆ ಎಂಬ ನಂಬಿಕೇ ಇದೆ.
ಕಾಂಗ್ರೆಸ್ ಸರಕಾರದ ಮೆಲೆ ಭರವಸೆ ಇದೆ ಎಂದು ಗುರುನಾಥಗೌಡ ಹೇಳಿದ್ದಾರೆ.
ಉದಯ ವಾರ್ತೆ ಹುಬ್ಬಳ್ಳಿ