ಆತ್ಮಹತ್ಯೆ ಮಾಡಿಕೊಂಡ RTI ಕಾರ್ಯಕರ್ತ – ಸಾವಿನ ಹಿಂದೆ ಹುಟ್ಟುಕೊಂಡಿವೆ ಹಲವು ಅನುಮಾನಗಳು
ಆನೇಕಲ್ –
RTI ಕಾರ್ಯಕರ್ತ ರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ ನಲ್ಲಿ ನಡೆದಿದೆ.ಹೌದು ನೇಣು ಬಿಗಿದ ಸ್ಥಿತಿಯಲ್ಲಿ ಆರ್ಟ್ ಟಿಐ ಕಾರ್ಯಕರ್ತನ ಶವ ಪತ್ತೆಯಾಗಿದೆ.ಪ್ರದೀಪ್(38) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆರ್ಟಿಐ ಕಾರ್ಯಕರ್ತನಾಗಿದ್ದು ಜಿಗಣಿ ಸಮೀಪದ ಮಾದಪಟ್ಟಣದಲ್ಲಿ ಪತ್ತೆಯಾಗಿದೆ.ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಾದಪಟ್ಟಣ ಕಾರಿನ ಶೆಡ್ ನಲ್ಲಿ ಅರೆನಗ್ನವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕಬ್ಬಿಣದ ಪೈಪ್ ಗೆ ಹಗ್ಗದಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಚೇರ್ ಮೇಲೆ ಇಳಿದು ಬಿದ್ದಿರುವ ಶವ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು ಆರ್ಟಿಐ ಕಾರ್ಯಕರ್ತನ ಧಿಡೀರ್ ಸಾವಿನ ಸುದ್ದಿಯನ್ನು ತಿಳಿದ ಜಿಗಣಿ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆಯನ್ನು ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಉದಯ ವಾರ್ತೆ ಆನೇಕಲ್