ದೆಹಲಿ ಪೋಲೀಸರ ಪ್ರೆಸ್ ಮೀಟ್,ಹುಬ್ಬಳ್ಳಿ ಪೋಲೀಸರು ಪುಲ್ ಅಲಟ್೯.

Share to all

ಹುಬ್ಬಳ್ಳಿ
ನಿನ್ನೆ ಮೂವರು ಉಗ್ರರರನ್ನ ಬಂಧಿಸಿದ ದೆಹಲಿ ಪೋಲೀಸರು ಹುಬ್ಬಳ್ಳಿ-ಧಾರವಾಡ ಮತ್ತು ಪಶ್ಮಿಘಟ್ಟಗಳಲ್ಲಿ ತರಬೇತಿ ಪಡೆದಿರುವ ಭಯಾನಕ ವಿಷಯವನ್ನ ಸ್ಪಷ್ಟಪಡಿಸಿದ್ದಾರೆ

ನಿನ್ನೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದೆಹಲಿ ಪೋಲೀಸರು, ಮೂವರು ಉಗ್ರರನ್ನು ಬಂಧಿಸಲಾಗಿದೆ.ಮೂವರನ್ನು ಬಂಧಿಸಿ ಅವರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.ಹುಬ್ಬಳ್ಳಿ-ಧಾರವಾಡ ಸೇರಿದಂತೆ ಪಶ್ಚಿಮ ಘಟ್ಟಗಳಲ್ಲಿ ತರಬೇತಿ ಪಡೆದಿದ್ದಾರೆ ಎಂಬ ಆತಂಕಕಾರಿ ವಿಷಯವನ್ನ ದೆಹಲಿ ಪೋಲೀಸರು ಹೇಳಿದ ಬೆನ್ನಲ್ಲೆ ಹುಬ್ಬಳ್ಳಿ-ಧಾರವಾಡ ಪೋಲೀಸರು ಕಮೀಷನರ್ ಆದೇಶದಂತೆ ಪುಲ್ ಅಲಟ್೯ಆಗಿದ್ದಾರೆ.ಅಲ್ಲದೇ ದೆಹಲಿ ಪೋಲೀಸರು ಹೇಳಿದಂತೆ ಉಗ್ರರ ಕ್ಯಾಂಪ್ ಎಲ್ಲಿ ಅಂತಾ ಹುಬ್ಬಳ್ಳಿ ಪೋಲೀಸರು ಬೆನ್ನತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಉಗ್ರರ ಹೆಸರು ಕಾಣೆಯಾಗಿತ್ತು.ಈಗ ಮತ್ತೇ ಅವರ ಹೆಸರು ಹುಬ್ಬಳ್ಳಿಯಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಉಗ್ರರ ತರಬೇತಿ ತಾಣವಾಗಿದೆಯಾ ಅನ್ನೋ ಸಂಶಯ ಆರಂಭವಾಗಿದೆ.

ಉದಯ ವಾರ್ತೆ ಹುಬ್ಬಳ್ಳಿ


Share to all

You May Also Like

More From Author