ಜಸ್ಟಿಸ್ ಫಾರ್ ರೇಣುಕಾಸ್ವಾಮಿ ಮೋಹಕ ತಾರೆ ರಮ್ಯಾ ಪೋಸ್ಟ್.ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಅನ್ನೋ ಆಯ್ಕೆ ಇದೆ ರಮ್ಯಾ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಸೇರಿ ಹಲವು ಸಹಚರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಟ್ರೋಲ್ ಮಾಡುವ ಮೂಲಕ ಕೆಲವರು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಇನ್ನೊಬ್ಬರಿಗೆ ಥಳಿಸಲು ಮತ್ತು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಟ್ರೋಲ್ ಮಾಡಿದರೆ ಪೊಲೀಸರಿಗೆ ದೂರು ನೀಡಿ. ಪೊಲೀಸರು ಸಾಧ್ಯವಾದಷ್ಟೂ ಕೆಲಸ ಮಾಡತ್ತಾರೆ. ಇನ್ನು ದರ್ಶನ್ ಪ್ರಕರಣದಲ್ಲಿ ಪೊಲೀಸರು ರಾಜಕೀಯ ಶಕ್ತಿಗಳಿಗೆ ಮಣಿಯದೇ ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.
ನನ್ನನ್ನೂ ಸೇರಿಸಿ ನಟ-ನಟಿಯರನ್ನು, ಸಾಮಾನ್ಯರನ್ನೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಅನ್ನೋ ಆಯ್ಕೆ ಕೂಡ ಇರುತ್ತದೆ. ನಮಗೆ ಬೇಡ ಎನಿಸಿದವರನ್ನು ಬ್ಲಾಕ್ ಮಾಡಬೇಕು. ಟ್ರೋಲ್ ಮಾಡುವವರಿಗೆ ಪೊಲೀಸರೂ ಎಚ್ಚರಿಕೆ ನೀಡಬೇಕು ಎಂದಿದ್ದಾರೆ. ಇನ್ನು ಕೆಟ್ಟದಾಗಿ ಸಂದೇಶ ಕಳುಹಿಸಿದರೆ ಕೊಲ್ಲುವ ಶೋಷಣೆಯ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕೇಸ್ ಬೆಳಕಿಗೆ ಬರುತ್ತಿದ್ದಂತೆ ದರ್ಶನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ..ಟೀಕೆ.. ಕೆಟ್ಟದಾಗಿ ಟ್ರೋಲ್ ಮಾಡಲು ಶುರು ಆಗಿದೆ. ಈ ಹಿನ್ನೆಲೆಯಲ್ಲಿ ನಟಿ ರಮ್ಯಾ ತಮ್ಮ ಇನ್ಸ್ಟಾ ಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಟ್ರೋಲರ್ಸ್‌ಗೆ ಪೊಲೀಸರು ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.