ಮೂವತ್ತು ಘಂಟೆ ಕಳೆದರೂ ಪಾಲಿಕೆಯ ಆಸ್ತಿ ಕಬಳಿಸಿದವರ ವಿರುದ್ಧ ದಾಖಲಾಗಲಿಲ್ಲಾ FIR..ಗೌಡ್ರೇ ನಿಮಗಾಗಿ ರಾತ್ರಿ ಇಡೀ ಧರಣಿ ಮಾಡಿ ಕರೆಸಿಕೊಂಡಿದ್ದಾರೆ ಕಾರ್ಪೋರೇಟರ್.ಅದನ್ನಾದರೂ ಉಳಿಸಿಕೊಳ್ಳಿ.
ಮೂವತ್ತು ಘಂಟೆ ಕಳೆದರೂ ಪಾಲಿಕೆಯ ಆಸ್ತಿ ಕಬಳಿಸಿದವರ ವಿರುದ್ಧ ದಾಖಲಾಗಲಿಲ್ಲಾ FIR..ಗೌಡ್ರೇ ನಿಮಗಾಗಿ ರಾತ್ರಿ ಇಡೀ ಧರಣಿ ಮಾಡಿ ಕರೆಸಿಕೊಂಡಿದ್ದಾರೆ ಕಾರ್ಪೋರೇಟರ್.ಅದನ್ನಾದರೂ ಉಳಿಸಿಕೊಳ್ಳಿ.
ಹುಬ್ಬಳ್ಳಿ:-ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಸ್ತಿ ಕಬಳಿಸಿದವರ ವಿರುದ್ಧ ದೂರು ದಾಖಲು ಮಾಡಲು ವಲಯ ಕಛೇರಿ -7 ರ ವಲಯ ಆಯುಕ್ತರಾದ ಮಾಲಿಪಾಟೀಲ ಸಾಹೇಬ್ರು ಹಿಂದೆ ಮುಂದೆ ನೋಡತಿರುವುದು ಯಾಕೆ.?.
ಮಾಲಿಪಾಟೀಲ ಸಾಹೇಬ್ರು ಒಳ್ಳೆ ಕೆಲಸಗಾರರು ಅಂತಾ ಕಾರ್ಪೋರೇಟರ್ ಆರೀಪ್ ಬದ್ರಾಪುರ ಸೇರಿದಂತೆ ಕಾಂಗ್ರೆಸ್ ಮುಖಂಡರು ವಲಯ ಕಛೇರಿ ಒಳಗೆ ಮತ್ತು ಹೊರಗೆ ಹಗಲು ರಾತ್ರಿ ಧರಣಿ ನಡೆಸಿ ನಿಮಗೋಸ್ಕರ ರಾತ್ರಿಯೇ ಆದೇಶ ಮಾಡಿಸಿಕೊಂಡಿದ್ದಾರೆ.ಅದನ್ನಾದರೂ ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕಲ್ಲಾ ಸಾಹೇಬ್ರೇ.
!!!!ಏನದು ಪ್ರಕರಣ!!!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆನಂದ ನಗರದಲ್ಲಿರುವ ಸರ್ವೇ ನಂಬರ 82/1+2 ಅ ರಲ್ಲಿ ಪಾಲಿಕೆಗೆ ಮೀಸಲಿಟ್ಟ ಉದ್ಯಾನವನ ಜಾಗೆಗೆ ಕೆಲವರು ಬೇಲಿ ಹಾಕಿ ಪಾಲಿಕೆಯ ಆಸ್ತಿಗೆ ಕನ್ನ ಹಾಕಿದ್ದರ ಕುರಿತು ಉದಯ ವಾರ್ತೆ ದಾಖಲೆಯ ಸಮೇತ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಕಮೀಷನರ್ ಡಾ; ಈಶ್ವರ ಉಳ್ಳಾಗಡ್ಡಿ ಅವರ ಇಮಿಡಿಯೇಟ್ ಕ್ರಮ ಕೈಕೊಳ್ಳಲು ವಲಯ ಆಯುಕ್ತರಿಗೆ ಸೂಚನೆ ಕೊಟ್ಟಿದ್ದರು.
ಕಮೀಷನರ್ ಸೂಚನೆ ಮೇರೆಗೆ ಪಾಲಿಕೆಯ ಆಸ್ತಿಗೆ ರಾತ್ರೋ ರಾತ್ರಿ ಪಾಲಿಕೆಯ ಬೋಡ್೯ ಹಾಕಿ ಕೈ ತೊಳೆದುಕೊಂಡ ವಲಯ ಆಯುಕ್ತರು ಪಾಲಿಕೆಯ ಆಸ್ತಿ ಕಬಳಿಸಿದವರ ವಿರುದ್ದ ದೂರು ನೀಡಲು ಮೀನಾ ಮೇಷ ಎಣಿಸುತ್ತಿರುವುದು ಯಾಕೆ..? ವಲಯ ಆಯುಕ್ತರು ಇವತ್ತಾದರೂ ಪಾಲಿಕೆಯ ಆಸ್ತಿ ಕಬಳಿಸಲು ಪ್ರಯತ್ನಿಸಿದವರ ವಿರುದ್ದ ದೂರು ದಾಖಲು ಮಾಡತಾರಾ ಕಾದು ನೋಡಬೇಕಿದೆ.