ಸಂಡೇ ಆದರೂ ಸಿಟಿ ರೌಂಡ್ಸ್ ಹಾಕಿದ ದಂಡಪ್ಪನವರ ಡಾಕ್ಟರ್. ಡೆಂಗ್ಯೂ ಹಾಗೂ ಸೊಳ್ಳೆ ನಿಯಮತ್ರಣಕ್ಕೆ ಮನೆ ಮನೆಗೆ ಭೇಟಿ.ಜಿಡ್ಡುಗಟ್ಟಿದ ನೀರು ಕಸ ಎತ್ತಂಗಡಿ.

Share to all

ಸಂಡೇ ಆದರೂ ಸಿಟಿ ರೌಂಡ್ಸ್ ಹಾಕಿದ ದಂಡಪ್ಪನವರ ಡಾಕ್ಟರ್. ಡೆಂಗ್ಯೂ ಹಾಗೂ ಸೊಳ್ಳೆ ನಿಯಮತ್ರಣಕ್ಕೆ ಮನೆ ಮನೆಗೆ ಭೇಟಿ.ಜಿಡ್ಡುಗಟ್ಟಿದ ನೀರು ಕಸ ಎತ್ತಂಗಡಿ.

ಹುಬ್ಬಳ್ಳಿ:- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿರುವ ಶ್ರೀಧರ ದಂಡಪ್ಪನವರ ಸಂಡೇ ಆದರೂ ಸಹ ಹುಬ್ಬಳ್ಳಿಯಲ್ಲಿ ಡೆಂಗ್ಯೂ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಇದಕ್ಕೆ ಸಾಕ್ಷಿ ಎಂಬಂತೆ ಇಂದು ರವಿವಾರ ಅವರಿಗೆ ರಜೆ ಇದ್ದರೂ ಬೆಳ್ಳಂ ಬೆಳೆಗ್ಗೆ ಪಾಲಿಕೆಯ ಸಿಬ್ಬಂದಿಗಳೊಂದಿಗೆ ಎಸ್ ಎಂ ಕೃಷ್ಣಾ ನಗರ ಸೇರಿದಂತೆ ಅನೇಕ ಕಡೆ ತೆರಳಿ ಮನೆಯ ಮುಂದೆ ಇರುವ ಹಳೆಯ ನೀರು, ಕಸ ,ಕಡ್ಡಿ ತೆಗೆಸುವ ಮೂಲಕ ಡೆಂಗ್ಯೂ ಹೇಗೆ ಹರಡುತ್ತದೆ ನೀವೂ ಹೇಗೆಲ್ಲಾ ಮನೆ ಸ್ವಚ್ಛ ಇಟ್ಟು ಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು.

ಸಂಡೇ ಬಂದರೆ ಮೋಬೈಲ್ ಸ್ವಿಚ್ಡ್ ಆಪ್ ಮಾಡಿ ಎಂಜಾಯ್ ಮಾಡುವ ಅಧಿಕಾರಿಗಳೇ ಹೆಚ್ಚಾಗಿರುವ ಈ ಕಾಲದಲ್ಲಿ ಸಂಡೇ ರಜೆ ಅನ್ನೋದನ್ನೂ ನೋಡದೇ ಕೆಲಸ ಮಾಡುವ ಡಾಕ್ಟರ್ ದಂಡಪ್ಪನವವರಿಗೊಂದ ಹ್ಯಾಟ್ಸ್ ಆಪ್ ಹೇಳಲೇಬೇಕು.

ಉದಯ ವಾರ್ತೆ
ಹುಬ್ಬಳ್ಳಿ


Share to all

You May Also Like

More From Author