ಇರುವುದೇ ಅಕ್ರಮ ಹುದ್ದೆಯಲ್ಲಿ.ಅಷ್ಟೇ ಅಲ್ಲದೇ ಈಗ ಅವರಿಗೆ ಜೋನಲ್ ಕಮೀಷನರ್ ಹುದ್ದೆ ಬೇಕಂತೆ.ಏನಪ್ಪಾ ಅವರ ರಾಜಕಾರಣ.ಅಂತಹ ಅಧಿಕಾರಿಗಳನ್ನು ಪಾಲಿಕೆಯಿಂದ ಹೊರ ಹಾಕುವುದು ಯಾವಾಗ.?
ಹುಬ್ಬಳ್ಳಿ:-ಹೌದು ನಾವು ಹೇಳತಾ ಹೊರಟಿರುವುದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅಕ್ರಮವಾಗಿ ಕಂದಾಯ ಅಧಿಕಾರಿಯಾಗಿರುವ M.B.ಸಬರದ ಸಾಹೇಬರ ಸ್ಟೋರಿ.
ಈಗ ಸಬರದ ಸಾಹೇಬ್ರು ಮಹಾನಗರ ಪಾಲಿಕೆಯಲ್ಲಿ ಯಾವ ಹುದ್ದೆಯಲ್ಲಿದ್ದಾರೆ ಅನ್ನೋದು ಪ್ರಶ್ನೆ.ಯಾಕೆಂದರೆ ಇವರು ಕಳೆದ 02-08-2023 ಕ್ಕೆ ಪಾಲಿಕೆಯಿಂದ ಬಿಡುಗಡೆಗೊಳಿಸಿ ಪೌರಾಡಳಿತ ಸೇವೆಗೆ ಹಿಂದಿರುಗಿಸಿದ್ದಾರೆ.ಅಲ್ಲದೇ ನಗರಾಭಿವೃದ್ಧಿ ಇಲಾಖೆಯ ಪೌರ ಸೇವಾ ಶಾಖೆಗೆ ಹಾಜರಾಗುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.
ಪಾಲಿಕೆಯ ಕಮಿಷನರ್ ಆದೇಶ ಮಾಡಿದರೂ ಕ್ಯಾರೆ ಎನ್ನದ ಸಬರದ ಸಾಹೇಬ್ರು ಕಂದಾಯ ಅಧಿಕಾರಿ ಹುದ್ದೆಯಲ್ಲಿ ಅಕ್ರಮವಾಗಿ ಮುಂದುವರೆದಿದ್ದು ಅಷ್ಟೇ ಅಲ್ಲದೇ ಈಗ ಜೋನಲ್ ಕಡೆ ಕಣ್ಣು ಹಾಕಿದ್ದಾರಂತೆ.ಈಗ ಇವರನ್ನು ಜೋನಲ್ ಕಮಿಷನರ್ ಮಾಡಿದರೆ ಇದರಂತಹ ಜೋಕ್ ಬೇರೊಂದಿಲ್ಲಾ.
ಮಹಾನಗರ ಪಾಲಿಕೆಯಲ್ಲಿ ನಾ ಮುಂದು ತಾ ಮುಂದು ಎಂದು ಪೈಲ್ ಹಿಡಿದುಕೊಂಡು ಆ್ಯಕ್ಟಿವ್ ಆಗಿ ಓಡಾಡುವ ಕಾರ್ಪೋರೇಟರಗಳಿಗೆ ಪಾಲಿಕೆಯಲ್ಲಿ ಅಕ್ರಮವಾಗಿ ಹಸಿರು ಪೆನ್ನು ಹಿಡಿದು ಕಮೀಷನರ್ ಗಿಂತಲೂ ಮಿಗಿಲಾಗಿ ಡೌವ್ ಮಾಡುವ “ಸಿ” ದರ್ಜೆಯ ಅಧಿಕಾರಿಗಳು ಕಾಣತಾನೇ ಇಲ್ಲಾ.ಒಂದಾದರೂ ಸಾಮಾನ್ಯ ಸಭೆಯಲ್ಲಿ ಒಬ್ಬರೇ ಒಬ್ಬರು ಸದಸ್ಯರು ಅಕ್ರಮ ಅಧಿಕಾರಿಗಳ ಬಗ್ಗೆ ಮಾತಾಡಿದ ಉದಾಹರಣೆ ಇಲ್ಲಾ.ಹಿಂಗಾದರೆ ಹೆಂಗೆ..