ಕೆಎಂಎಪ್ ಕದ ತಟ್ಟಿದ ಮಾಜಿ ಶಾಸಕ ಹಾಗೂ ಹಾಲಿ ಶಾಸಕರ ಪೈಪೋಟಿ..ಲೀಗ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದ ಧಣಿ…ಕೆಪಿಸಿಸಿ ಕಾರ್ಯಾದ್ಯಕ್ಷನಿಗೆ ಪತ್ನಿಯ ಸೋಲಿನಿಂದ ಮತ್ತೊಂದು ಆಘಾತ..
ಧಾರವಾಡ:-ಇಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ.ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಬಿಜೆಪಿ ಅಭ್ಯರ್ಥಿ ಶಂಕರ್ ಮುಗದ್ ವಿರುದ್ಧ ಸೋಲು ಕಂಡಿದ್ದಾರೆ.
ಕೆಎಂಎಫ್ ಚುನಾಯಿತ ನಿರ್ದೇಶಕ ಶಂಕರ್ ಮುಗದ್ ವಿರುದ್ಧ ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯೆಯಾಗಿದ್ದ ಶಿವಲೀಲಾ ಕುಲಕರ್ಣಿ ಸ್ಪರ್ಧಿಸಿದ್ದರು.
ವಿನಯ್ ಕುಲಕರ್ಣಿ ಮತ್ತು ಅಮೃತ್ ದೇಸಾಯಿ ನಡುವಿನ ಪೈಪೋಟಿ ಕೆಎಂಎಫ್ ಬಾಗಿಲು ತಲುಪಿದೆ ಎಂದು ಹೇಳಲಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರ ಕಾಂಗ್ರೆಸ್ ಆಗಿದ್ದರೂ ಅಮೃತ್ ದೇಸಾಯಿ ಅವರ ನಿಕಟ ನೆರವಿನ ಮೂಲಕ ಕೆಎಂಎಫ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೆಲ್ಲ ನೋಡಿದಾಗ ಧಾರವಾಡ ಗ್ರಾಮೀಣ ಕ್ಷೇತ್ರ ಇಂದಿಗೂ ಧಾರವಾಡ ಜಿಲ್ಲೆಯ ರಾಜಕೀಯದ ಕೇಂದ್ರಬಿಂದುವಾಗಿದೆ. ಇದರಲ್ಲಿ ಅಮೃತ್ ದೇಸಾಯಿ ಅವರು ಕೆಎಂಎಫ್ ಅನ್ನು ಬಿಜೆಪಿ ಅಡಿಯಲ್ಲಿ ತೆಗೆದುಕೊಳ್ಳುವ ಮೂಲಕ ಮೊದಲ ಲೀಗ್ ಅನ್ನು ಗೆದ್ದಿದ್ದಾರೆ.