ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಸುತ್ತಾ ಕಾನೂನಿನ ಏಳು ಸುತ್ತಿನಕೋಟೆ ನಿರ್ಮಾಣವಾಗಿದೆ. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 29 ದಿನ ಕಳೆದಿದೆ. ಅಜಾನುಬಾಹು ದರ್ಶನ್ ಜೈಲ್ ಊಟ ಸೆಟ್ ಆಗದೆ 10 ಕೆ ಜಿ ತೂಕ ಕಳೆದುಕೊಂಡು ಸೊರಗಿದ್ದಾರಂತೆ. ಇನ್ನು ದರ್ಶನ್ ಮನೆ ಊಟ, ಹಾಸಿಗೆ ಹಾಗು ಪುಸ್ತಕಗಳ ಸೌಲಭ್ಯ ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ರು.
ಹೈಕೋರ್ಟ್ ಮ್ಯಾಜಿಸ್ಟೇಟ್ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ಇದೇ ವೇಳೆ ದರ್ಶನ್ ನ ಮೆಡಿಕಲ್ ಹಾಗು ಇತರೆ ಎಲ್ಲಾ ವರದಿಗಳನ್ನು ಕೋರ್ಟ್ ಸಲ್ಲಿಸುವಂತೆ ಜ್ಯಾಯಾಧೀಶರು ಜೈಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಇಂದು ದರ್ಶನ್ ಗೆ ಜುಲ್ ಊಟನೇ ಫಿಕ್ಸ್ ಆಗುತ್ತಾ ಇಲ್ಲಾ ಮನೆ ಊಟ ಸಿಗುತ್ತಾ ಅನ್ನೋ ಕುತೂಹಲ ಮೂಡಿಸಿದೆ.