ಹಾಸನ: ಹಾಸನ ಜಿಲ್ಲೆಯ ಅರಸಿಕರೆಯ ಕಾಳೇನಹಳ್ಳಿಯಲ್ಲಿ ಡಾಲಿ ಧನಂಜಯ್ ಅಜ್ಜಿ ಕೊನೆಯುಸಿರೆಳೆದಿದ್ದಾರೆ. 95 ವರ್ಷದ ಅಜ್ಜಿ ಮಲ್ಲಮ್ಮ ವಯೋಸಹಜ ತೊಂದರೆಯಿಂದಲೇ ನಿಧನರಾಗಿದ್ದಾರೆ. ಅಜ್ಜಿಯೊಂದಿಗೆ ತುಂಬಾನೆ ಅಟ್ಯಾಚ್ ಆಗಿದ್ದ ಡಾಲಿ ಧನಂಜಯ್ ಊರಿಗೆ ಹೋದಾಗ ಹೆಚ್ಚಿನ ಸಮಯ ಅಜ್ಜಿ ಜೊತೆಗೂ ಕಳೆಯುತ್ತಿದ್ದರು.
ಅಜ್ಜಿ ಮಲ್ಲಮ್ಮ ಅವರಿಗೆ ಒಟ್ಟು ಐದು ಮಕ್ಕಳಿದ್ದರು. ಅದರಲ್ಲಿ ಡಾಲಿ ಧನಂಜಯ್ ಅವರ ತಂದೆ ಅಡವಿಸ್ವಾಮಿ ಅವರು ಎರಡನೇ ಅವರಾಗಿದ್ದಾರೆ. ಲಿಂಗದೇವರಾಜೇಗೌಡ ಪತ್ನಿಯಾಗಿದ್ದ ಮಲ್ಲಮ್ಮ ಅವರು ವಯೋಸಹಜ ತೊಂದರೆಯಿಂದಲೇ ಬಳಲುತ್ತಿದ್ದರು. ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ಶೋದಲ್ಲೂ ಅಜ್ಜಿ ಮಲಮ್ಮ ಬಂದಿದ್ದರು. ಇಂದು ಊರಲ್ಲಿಯೇ ಅಜ್ಜಿಯ ಅಂತ್ಯಕ್ರಿಯೆ ಕೂಡ ನೆರವೇರುತ್ತಿದೆ.