ಮೊದಲ ಮಗುವಿನ ನಿರೀಕ್ಷೆಯಲ್ಲಿ ಮಿಲನಾ ನಾಗರಾಜ್: ತುಂಬು ಗರ್ಭಿಣಿಯ ಫೋಟೋ ವೈರಲ್!

Share to all

ಪ್ರೀತಿಸಿ ಮದುವೆಯಾದ ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದಾರೆ. ಲವ್ ಮಾಕ್ಟೇಲ್’ ಸಿನಿಮಾದಲ್ಲಿ ಒಂದಾಗದ ಇವರು ನಿಜ ಜೀವನದಲ್ಲಿ ಬಹಳ ಪ್ರೀತಿಯಿಂದ ಜೀವನ ಮಾಡ್ತಿದ್ದಾರೆ.

ಇತ್ತೀಚೆಗೆ ಈ ದಂಪತಿ ಖುಷಿ ವಿಚಾರ ಸುದ್ದಿ ಹಂಚಿಕೊಂಡಿದ್ದರು. ಅದುವೆ ಮೊದಲ ಮಗುವಿನ ಬಗ್ಗೆ. ಆ ಬಳಿಕ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಬರುತ್ತಿದ್ದಾರೆ. ಮಿಲನಾ ಅವರು ಸೆಪ್ಟೆಂಬರ್​ನಲ್ಲಿ ಮಗುವಿಗೆ ಜನ್ಮನೀಡಲಿದ್ದಾರೆ. ಆ ದಿನಕ್ಕಾಗಿ ಅವರ ಕುಟುಂಬ ಹಾಗೂ ಫ್ಯಾನ್ಸ್ ಕಾದಿದ್ದಾರೆ. ಇದಕ್ಕೂ ಮೊದಲು ವಿವಿಧ ಫೋಟೋಗಳನ್ನು ಮಿಲನಾ ಅವರು ಹಂಚಿಕೊಳ್ಳುತ್ತಾ ಇದ್ದಾರೆ.

ಈಗ ತುಂಬು ಗರ್ಭಿಣಿ ಆಗಿ ಮಿಲನಾ ನಾಗರಾಜ್ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಪತಿಯ ಜೊತೆ ಅವರು ಪೋಸ್​​ ಕೊಟ್ಟಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ. ಮಿಲನಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ಸದ್ಯ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಮಗು ಜನಿಸಿದ ಬಳಿಕ ಅದರ ಆರೈಕೆಯಲ್ಲಿ ಅವರು ಬ್ಯುಸಿ ಆಗಲಿದ್ದಾರೆ.


Share to all

You May Also Like

More From Author