ಮುಂದೆ ಸೆಕ್ಯುರಿಟಿ ಆಗಲು ರೆಡಿ ಆಗು: ACP ಚಂದನ್ ಮೇಲೆ ಮತ್ತೆ-ಮತ್ತೆ ಮುಗಿ ಬೀಳ್ತಿದ್ದಾರೆ ದರ್ಶನ್ ಫ್ಯಾನ್ಸ್!

Share to all

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಒಂದೇ, ಎಂತಹ ಪ್ರಭಾವಿಗಳೇ ಆದರೂ ಕಾನೂನಿಗೆ ತಲೆಬಾಗಲೇಬೇಕು ಎನ್ನುವುದು ಈ ಪ್ರಕರಣದಿಂದ ಸಾಬೀತಾಗಿದೆ. ಪೊಲೀಸರ ದಕ್ಷತೆ, ಕಾರ್ಯವೈಖರಿಯನ್ನು ಜನ ಶ್ಲಾಘಿಸುತ್ತಿದ್ದಾರೆ.

ಆದರೆ ಮತ್ತೊಂದೆಡೆ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ರನ್ನು ಬಂಧಿಸಿದ್ದ ACP ಚಂದನ್ ಅವರನ್ನು ನಟ ದರ್ಶನ್ ಅಭಿಮಾನಿಗಳು ಮಾತ್ರ ಅವರನ್ನು ಟಾರ್ಗೆಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ಜೂನ್ 11ರಂದು ಬೆಳಗ್ಗೆ ಮೈಸೂರಿನಲ್ಲಿ ಎಸಿಪಿ ಚಂದನ್, ನಟ ದರ್ಶನ್‌ನನ್ನು ವಶಕ್ಕೆ ಪಡೆದರು.ಆರೋಪಿ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದುಕೊಂಡು, ಬೆಂಗಳೂರಿಗೆ ಕರೆತಂದಿದ್ದ ಇನ್ಸ್‌ಪೆಕ್ಟರ್‌ ಗಿರೀಶ್‌ ನಾಯ್ಕ್‌ ಅವರು ಮತ್ತೆ ತನಿಖಾ ತಂಡವನ್ನು ಸೇರಿಕೊಂಡಿದ್ದು, ತನಿಖೆಗೆ ಬಲ ಬಂದಂತಾಗಿತ್ತು. ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎಲ್ಲಾ 17 ಜನ ಆರೋಪಿಗಳು ಇದೀಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಮುಂದಾಗಿದ್ದಾರೆ

ಈ ವರ್ಷ ನಟ ದರ್ಶನ್ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಎಸಿಪಿ ಚಂದನ್ ಸಹ ಅಲ್ಲಿಗೆ ಹೋಗಿದ್ದರು. ನಟ ದರ್ಶನ್ ಕೈ ಕುಲುಕಿ ಶುಭ ಕೋರಿದ್ದರು. ಈ ವೀಡಿಯೋವನ್ನು ಕೆಲವರು ವೈರಲ್ ಮಾಡಿ `ಹುಲಿ ಅಂತೆ ಹುಲಿ, ಈ ಹುಲಿಗೆ ಹೆಬ್ಬುಲಿ ಡಿ ಬಾಸ್’ ಎಂದು ಹಾಕಿದ್ದಾರೆ.ದರ್ಶನ್ ಸರ್ ಬರ್ತ್‌ಡೇಗೂ ಅವನೇ ಸೆಕ್ಯೂರಿಟಿ ಆಗಿದ್ದ, ಇವಾಗ ಡಿಬಾಸ್ ಜೈಲಿಂದ ರಿಲೀಸ್ ಆಗಬೇಕಾದ್ರೆ ಇವನೇ ಸೆಕ್ಯೂರಿಟಿ ಆಗಿರ್ತಾನೆ ಅಂತೆಲ್ಲಾ ಬರೆದು ವೈರಲ್ ಮಾಡುತ್ತಿದ್ದಾರೆ.


Share to all

You May Also Like

More From Author