ಹೆಂಡತಿ ಇರಿದು ಕೊಂದ ಗಂಡ: ಪೊಲೀಸರಿಂದ ತಪ್ಪಿಸಿಕೊಳ್ಳಲು ಟೆರಸ್ ಮೇಲಿಂದ ಬಿತ್ತು ಸತ್ತ!

Share to all

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದ ಬಳಿಕ ತಾನು ಟೆರಸ್ ಮೇಲಿಂದ ಆಕಸ್ಮಿಕವಾಗಿ ಬಿದ್ದು ಗಂಡ ಸತ್ತ ಘಟನೆ ಜರುಗಿದೆ. ಹೌದು, ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿ ಬಳಿಕ ಫೇಸ್‌ಬುಕ್‌ ಲೈವ್‌ ಮೂಲಕ ಹತ್ಯೆ ಬಗ್ಗೆ ಪತಿ ವಿವರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕೊಲೆ ನಡೆದ ಐದು ದಿನದ ಬಳಿಕ ಕೇಸ್​ನಲ್ಲಿ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಕೋಲಾರದಲ್ಲಿ ಕೊಲೆ ಆರೋಪಿ ತಬರೇಜ್ ಪಾಷಾ ಮೃತಪಟ್ಟಿದ್ದಾನೆ. ಪೊಲೀಸರಿಂದ ತಪ್ಪಿಸಿಕೊಳ್ಳುವಾಗ 12ಅಡಿ ಎತ್ತರದಿಂದ ಜಿಗಿದು ಮೃತಪಟ್ಟಿದ್ದಾನೆ.

ಕೌಟುಂಬಿಕ ವಿಚಾರಕ್ಕೆ ಸೈಯಿದಾ ಫಾಜೀಲ್‌ ಫಾತೀಮಾ(34) ತನ್ನ ಪತಿ ತಬರೇಜ್ ಪಾಷಾ ಜೊತೆ ಜಗಳವಾಡಿಕೊಂಡು ತವರು ಮನೆ ಸೇರಿದ್ದಳು. ಇದೇ ತಿಂಗಳ 2ರಂದು ಆರೋಪಿ ತಬರೇಜ್ ತನ್ನ ಅತ್ತೆಯ ಮನೆಗೆ ನುಗ್ಗಿ ಅತ್ತೆಯ ಎದುರೇ ಪತ್ನಿಯನ್ನು ಹತ್ತಾರು ಭಾರೀ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಮನೆಗೆ ಬರುವ ಮುನ್ನ ಹಾಗೂ ಹತ್ಯೆ ವೇಳೆ ಫೇಸ್‌ಬುಕ್‌ ಲೈವ್ ಮಾಡಿ ಕೊಲೆ ಬಗ್ಗೆ ಲೈವ್​ನಲ್ಲೇ ವಿವರಿಸಿದ್ದ. ಇನ್ನು ಕೊಲೆ ಬಳಿಕ ಕೋಲಾರಕ್ಕೆ ಎಸ್ಕೇಪ್ ಆಗಿದ್ದ. ಈ ಘಟನೆ ಸಂಬಂಧ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ತಬರೇಜ್ ಪಾಷಾ ಮೊಬೈಲ್ ಸ್ವಿಚ್ ಆಫ್ ಮಾಡಿ ಕೋಲಾರದ ಮಸೀದಿಯಲ್ಲಿ ನಾಲ್ಕು ದಿನ ಉಳಿದುಕೊಂಡಿದ್ದ. ನಿನ್ನೆ ಕೋಲಾರದ ಚಿಕ್ಕಮ್ಮನ ಮನೆಗೆ ತೆರಳಿದ್ದ. ಈ ವಿಚಾರ ತಿಳಿದ ಚಾಮರಾಜಪೇಟೆ ಪೊಲೀಸರ ತಂಡ ಕೋಲಾರಕ್ಕೆ ತೆರಳಿದ್ದು ಆರೋಪಿ ಬಂಧಿಸಲು ಸಜ್ಜಾಗಿತ್ತು. ಆರೋಪಿಯನ್ನು ಬಂಧಿಸಲು ಮನೆಗೆ ಎಂಟ್ರಿ ಕೊಟ್ಟಿದ್ದು ತಪ್ಪಿಸಿಕೊಳ್ಳೊ ಬರದಲ್ಲಿ ಮನೆಯ ಟೆರೆಸ್ ನಿಂದ ಜಿಗಿದ ಆರೋಪಿ ಮೃತಪಟ್ಟಿದ್ದಾನೆ. ಟೆರೆಸ್ ನಿಂದ ಜಿಗಿದು ಮನೆಯ ಹಿಂಬದಿಯಿಂದ ಎಸ್ಕೇಪ್ ಆಗಲು ಯತ್ನಿಸಿದ ಆರೋಪಿ ತಬರೇಜ್, 12 ಅಡಿ ಎತ್ತರದಿಂದ ಬಿದ್ದ ಪರಿಣಾಮ ಅಸ್ವಸ್ತನಾಗಿದ್ದ. ಆದರೆ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ.


Share to all

You May Also Like

More From Author