ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ನಲ್ಲಿ ಅವರ ಲುಕ್ ಮತ್ತು ಹೇರ್‌ಸ್ಟೈಲ್ ಎಲ್ಲಿಯೂ ರಿವೀಲ್ ಆಗಿರಲಿಲ್ಲ. ಯಶ್ ಕೂಡ ಈ ಕುರಿತು ಗೌಪ್ಯತೆ ಕಾಪಾಡಿಕೊಳ್ಳಲು ತಲೆಗೆ ಕ್ಯಾಪ್ ಅಥವಾ ಸ್ಕಾರ್ಫ್ ಧರಿಸಿ ಓಡಾಡುತ್ತಿದ್ದರು. ಈಗ ಅವರು ‘ಟಾಕ್ಸಿಕ್’ ಸಿನಿಮಾದ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಯಶ್ ಅವರ ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ ಹೌಸ್ ಹಣ ಹೂಡುತ್ತಿದೆ.
ಅದರಂತೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಮುಹೂರ್ತ ಇಂದು ಮುಂಜಾನೆ ನೆರವೇರಿದೆ.
ತಮ್ಮ ಹಲವು ಚಿತ್ರಗಳಿಗೆ ಕೆಲಸ ಮಾಡಿರೋ ಲೈಟ್ ಆಫೀಸರ್ ಕೈಯಲ್ಲಿ ಯಶ್ ಇಂದು ತಮ್ಮ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಚಿತ್ರದ ಮುಹೂರ್ತಕ್ಕೆ ಕ್ಲ್ಯಾಪ್ ಮಾಡಿಸಿ, ತಂತ್ರಜ್ಞನ ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ
ಟಾಕ್ಸಿಕ್ ಸಿನಿಮಾದ ಬಹುಕೋಟಿ ವೆಚ್ಚದಲ್ಲಿಯೇ ರೆಡಿ ಆಗುತ್ತಿದೆ. ಚಿತ್ರವನ್ನ ದೊಡ್ಡ ಮಟ್ಟದಲ್ಲಿಯೆ ತಯಾರಿಸೋ ಪ್ಲಾನ್ ಹಾಕಲಾಗಿದೆ. ಈ ಮೂಲಕ ಚಿತ್ರದಲ್ಲಿ ಹಾಲಿವುಡ್ ಟೆಕ್ನಿಷನ್‌ಗಳೇ ಕೆಲಸ ಮಾಡುತ್ತಿದ್ದಾರೆ. ಈ ಮೊದಲೇ ಹೇಳಿದಂತೆ ಹಾಲಿವುಡ್‌ನ ಜನರನ್ನ ಇಲ್ಲಿಗೆ ತರೋದಾಗಿ ಯಶ್ ಹೇಳಿಕೊಂಡಿದ್ದರು. ಆ ಒಂದು ಕೆಲಸ ಇದೀಗ ಆಗುತ್ತಿದೆ.

ಟಾಕ್ಸಿಕ್ ಚಿತ್ರವನ್ನ ಗೀತು ಮೋಹನ್ ದಾಸ್ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಯಶ್ ಲುಕ್ ಬೇರೆ ರೀತಿನೇ ಇದೆ. ಯಶ್ ಅಭಿಮಾನಿಗಳೂ ಈ ಚಿತ್ರವನ್ನ ಅಷ್ಟೇ ಕುತೂಹಲದಿಂದಲೇ ಈಗ ನೊಡುತ್ತಿದ್ದಾರೆ.
ಟಾಕ್ಸಿಕ್ ಸಿನಿಮಾದ ಸ್ಟಾರ್ ಕಾಸ್ಟ್ ಏನು ? ಈ ಚಿತ್ರದಲ್ಲಿ ಯಾರೆಲ್ಲ ಇದ್ದಾರೆ? ರಾಕಿಂಗ್ ಸ್ಟಾರ್ ಯಶ್ ಪಾತ್ರದ ನಾಯಕಿ ಯಾರು.? ಈ ಪ್ರಶ್ನೆ ಹಾಗೆ ಇವೆ. ಕಾರಣ, ಸಿನಿಮಾದ ಸ್ಟಾರ್ ಕಾಸ್ಟ್ ಬಗ್ಗೆ ಸದ್ಯ ಎಲ್ಲೂ ಏನು ರಿವೀಲ್ ಆಗಿಲ್ಲ. ಬದಲಾಗಿ, ಸಿನಿಮಾ ಶುರು ಆಗಿದೆ ಅನ್ನುವ ಮಾಹಿತಿ ಮಾತ್ರ ರಿಲೀಸ್ ಆಗಿದೆ.