ಕಳೆದ ಒಂದು ವರ್ಷದಿಂದ ನಟ ನಾಗ ಚೈತನ್ಯ, ಶೋಭಿತ ದುಲಿಪಾಲಾ ಅವರು ಡೇಟ್ ಮಾಡುತ್ತಿದ್ದಾರೆ, ಒಟ್ಟಿಗೆ ಟ್ರಿಪ್ ಮಾಡುತ್ತಿದ್ದಾರೆ, ಆದಷ್ಟು ಬೇಗ ಮದುವೆ ಆಗಲಿದ್ದಾರೆ ಎನ್ನಲಾಗಿತ್ತು. ಸ್ಟಾರ್ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಇಂದು ಹೈದರಾಬಾದ್ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಅದರಲ್ಲೂ ಸ್ಯಾಮ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಇದಾಗಿದೆ. ಕೆಲವು ದಿನಗಳ ಹಿಂದೆ ನಾಗ ಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಜೊತೆ ಸುತ್ತಾಡುತ್ತಿದ್ದ ಫೋಟೋಗಳು ವೈರಲ್ ಆಗಿದ್ದವು. ನಟನ ಜೊತೆ ವೆಕೇಶನ್ಗೂ ಹೋಗಿದ್ದರು. ಇನ್ನೇನು ಮದುವೆ ಆಗ್ತಾರೆ ಎಂಬ ಗುಸುಗುಸ ಚರ್ಚೆ ಹಬ್ಬಿತ್ತು. ಈ ಬೆನ್ನಲ್ಲೇ ನಾಗ ಚೈತನ್ಯ ನಟಿ ಸೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಈ ಸಮಾರಂಭದಲ್ಲಿ ಕೆಲವೇ ಕೆಲವು ಜನರು ಭಾಗಿಯಾಗಿದ್ದಾರೆ. ಇಷ್ಟುದಿನವಾದ್ರೂ ಈ ಜೋಡಿ ತಮ್ಮ ಲವ್ ಬಗ್ಗೆ ಹೇಳಿಕೊಂಡಿಲ್ಲ. ನಿಶ್ಚಿತಾರ್ಥದ ಬಳಿಕ ನಾಗ ಚೈತನ್ಯ, ಶೋಭಿತಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮೊದಲು ಮಾಹಿತಿ ಕೊಡಲಿದ್ದಾರಂತೆ. ಒಟ್ಟಿನಲ್ಲಿ ಟಾಲಿವುಡ್‌ನಲ್ಲಿ ಇನ್ನೊಂದು ಮದುವೆ ಸಂಭ್ರಮ ಶುರುವಾಗಿದೆ.