ರೇಣುಕಾಸ್ವಾಮಿ ಕೊಲೆ ಕೇಸ್‌ʼನಲ್ಲಿ ದರ್ಶನ್‌ʼಗೆ ಕಂಟಕ ಫಿಕ್ಸ್..! FSL ರಿಪೋರ್ಟ್‌ʼನಲ್ಲಿ ಸ್ಫೋಟಕ ಮಾಹಿತಿ

Share to all

ಕೊಲೆ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ನಟ ದರ್ಶನ್​ & ಗ್ಯಾಂಗ್​ ವಿರುದ್ಧ ದಿನದಿಂದ ದಿನಕ್ಕೆ ಸಾಕ್ಷ್ಯಗಳು ಗಟ್ಟಿಯಾಗ್ತಿದೆ. ಪೊಲೀಸರು ಚಾರ್ಜ್‌ಶೀಟ್‌ ಹಾಕೋವರೆಗೆ ದರ್ಶನ್‌ಗೆ ಬೇಲ್‌ ಭಾಗ್ಯ ಸಿಗಲ್ಲ.. ಕೇಸ್‌ನಲ್ಲಿ ಮತ್ತಷ್ಟು ಸಾಕ್ಷ್ಯ ಕಲೆಗೆ ಪೊಲೀಸರು ಮುಂದಾಗಿರೋದ್ರಿಂದ ಡಿ ಗ್ಯಾಂಗ್‌ಗೆ ಸಂಕಷ್ಟ ತಪ್ಪಿದ್ದಲ್ಲ. ರೇಣುಕಾಸ್ವಾಮಿ ಮೃತದೇಹದ ಎಫ್‌ಎಸ್‌ಎಲ್ ವರದಿಯನ್ನು ಹೈದರಾಬಾದ್ ಗೆ ಕಳುಹಿಸಿಕೊಡಲಾಗಿತ್ತು.

ಇದರ ವರದಿ ನಿನ್ನೆ ಸಂಜೆಯೇ ಪೊಲೀಸರ ಕೈ ಸೇರಿದೆ ಎನ್ನಲಾಗಿದೆ. ಈ ವರದಿಯಲ್ಲಿ ರೇಣುಕಾಸ್ವಾಮಿಗೆ ಹೊಡೆದ ರಭಸಕ್ಕೆ ಆತನ ಪಕ್ಕೆಲುಬು ಮುರಿದು ಶ್ವಾಸಕೋಶವನ್ನು ಚುಚ್ಚಿದೆ ಎಂದು ಬಯಲಾಗಿದೆ.

ಇದು ದರ್ಶನ್ ಆಂಡ್ ಗ್ಯಾಂಗ್ ನಡೆಸಿದ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ವಿವರವಾದ ಎಫ್‌ಎಸ್‌ಎಲ್ ವರದಿ ಕೈ ಸೇರುತ್ತಿದ್ದಂತೇ ಇಂದು ತನಿಖಾಧಿಕಾರಿಗಳು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಮುಂದೆ ಯಾವ ರೀತಿ ಕಾನೂನು ಪ್ರಕ್ರಿಯೆ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

ಎಫ್‌ಎಸ್‌ಎಲ್ ರಿಪೋರ್ಟ್ 1 – ರೇಣುಕಾಸ್ವಾಮಿ ಎಫ್‌ಎಸ್‌ಲ್ ರಿಪೋರ್ಟ್

> ಎದೆಯ ಎಲುಬು ಮುರಿದಿದೆ
> ಶ್ವಾಸಕೋಶಕ್ಕೆ ಮೂಳೆ ಚುಚ್ಚಿದೆ
> ತಲೆಗೆ ಗಂಭೀರ ಗಾಯ
> ಮೆದುಳಿನಲ್ಲಿ ತೀವ್ರ ರಕ್ತಸ್ರಾವ
> ಲಾರಿಯ ಹಿಂಭಾಗಕ್ಕೆ ಗುದ್ದಿರೋದ್ರಿಂದ ತಲೆಗೆ ಗಾಯ
> ಬೆನ್ನು ಮೂಲೆ ತೀವ್ರ ಹಾನಿ
> ವೃಷಣ ಚೀಲದಲ್ಲಿ ರಕ್ತ ಸೋರಿಕೆ
> ಕಾಲಲ್ಲಿ ಒದ್ದಿರೋದ್ರಿಂದ ವೃಷಣಕ್ಕೆ ಗಾಯ
> ಮೊಣಕಾಲು ಮುರಿತ
> ಬಲಗಣ್ಣಿಗೆ ತೀವ್ರವಾದ ಹಾನಿ
> ಡೆತ್ ಟೈಂ: ಸಂಜೆ ೬ರಿಂದ ೬:೩೦
> ಸಾವಿಗೆ ಕಾರಣ: ಮೆದುಳಿಗೆ ತೀವ್ರ ರಕ್ತಸ್ರಾವ
ಸಾವಿಗೆ ಕಾರಣ : ಮೆದಳಿನಲ್ಲಿ ತೀವ್ರವಾದ ರಕ್ತಸ್ರಾವ

ಎಫ್‌ಎಸ್‌ಎಲ್ ರಿಪೋರ್ಟ್ 2 – ದರ್ಶನ್ ಬಟ್ಟೆ ಮೇಲೆ ರಕ್ತದ ಕಲೆ

> ಆರ್.ಆರ್. ನಗರ ನಿವಾಸದಲ್ಲಿ ವಶಕ್ಕೆ ಪಡೆದಿದ್ದ ಬಟ್ಟೆ
> ಕಪ್ಪು ಬಣ್ಣದ ಟೀ ಶರ್ಟ್, ನೀಲಿ ಕಲರ್ ಜೀನ್ಸ್ ಪ್ಯಾಂಟ್
> ಎರಡೂ ಬಟ್ಟೆಯಲ್ಲಿ ರೇಣುಕಾಸ್ವಾಮಿಯ ರಕ್ತ ಪತ್ತೆ
> ಪ್ಯಾಂಟ್ ನಲ್ಲಿ ಚಿಮ್ಮಿದ ರೀತಿಯಲ್ಲಿ ರಕ್ತ ಪತ್ತೆ
> ಬಟ್ಟೆ ತೊಳೆದಿದ್ದರೂ ಲೂಮಿನಾಲ್ ಟೆಸ್ಟ್ನಲ್ಲಿ ರಕ್ತದ ಕಲೆ ಪತ್ತೆ

ಎಫ್‌ಎಸ್‌ಎಲ್ ರಿಪೋರ್ಟ್ ೩ – ಲಾಠಿ, ದೊಣ್ಣೆ, ಬೆಲ್ಟ್ನಲ್ಲಿ ರಕ್ತದ ಮಾದರಿ

> ರೇಣುಕಾಸ್ವಾಮಿ ಹಲ್ಲೆಗೆ ಬಳಸಿದ್ದ ವಸ್ತುಗಳ ಸಾಕ್ಷ್ಯ
> ಲಾಠಿ, ದೊಣ್ಣೆ, ಬೆಲ್ಟ್ನಲ್ಲಿ ರಕ್ತದ ಮಾದರಿ
> ದರ್ಶನ್ ಮನೆಯಲ್ಲಿದ್ದ ಲಾಠಿಯಲ್ಲಿ ರಕ್ತದ ಕಲೆ ಪತ್ತೆ
> ರಿಪೀಸ್ ಪಟ್ಟಿ, ದೊಣ್ಣೆಗಳ ಮೇಲೂ ರಕ್ತದ ಮಾದರಿ
> ಡಿಎನ್‌ಎ ಪರೀಕ್ಷೆಯಲ್ಲಿ ರಕ್ತದ ಮಾದರಿ ದೃಢ

ಎಫ್‌ಎಸ್‌ಎಲ್ ರಿಪೋರ್ಟ್ ೪ – ಮೊಬೈಲ್ ರಿಟ್ರೀವ್ನಲ್ಲಿ ದರ್ಶನ್ ಪಾತ್ರ…!

> ಕೊಲೆಯಾದ ಬಳಿಕ ದರ್ಶನ್, ಪವಿತ್ರಾಗೌಡ ಮೀಟಿಂಗ್
> ಆರೋಪಿಗಳು ಮೀಟಿಂಗ್ ಮಾಡಿರೋ ಬಗ್ಗೆ ಸಾಕ್ಷ್ಯ
> ಪೊಲೀಸರ ಭಯದಿಂದ ಸಿಸಿಟಿವಿ ವಿಡಿಯೋ ಡಿಲೀಟ್
> ಟೆಕ್ನಿಷಿಯನ್ ಕರೆಸಿ ವಿಡಿಯೋ ಡಿಲೀಟ್ ಮಾಡಿದ್ದ ದರ್ಶನ್
> ಸಿಸಿಟಿವಿ ಡಿವಿಆರ್‌ಗಳ ರಿಟ್ರೀವ್ ಮಾಡಿದ ಎಫ್ ಎಸ್ ಎಲ್

ಎಫ್‌ಎಸ್‌ಎಲ್ ರಿಪೋರ್ಟ್ ೫ – ಶವ ಸಾಗಾಟದ ಸಿಸಿಟಿವಿ

> ರೇಣುಕಾಸ್ವಾಮಿ ಶೆಡ್ಗೆ ಕರೆತರೋ ಸಿಸಿಟಿವಿ ರಿಟ್ರೀವ್
> ರೇಣುಕಾ ಹತ್ಯೆ ಬಳಿಕ ಶವ ಸಾಗಿಸೋ ಸಿಸಿಟಿವಿ ರಿಟ್ರೀವ್
> ಶೆಡ್‌ಗೆ ಬರುವ ೧೧ ವಾಹನಗಳ ದೃಶ್ಯ ಮ್ಯಾಚಿಂಗ್
>ದರ್ಶನ್ ಜೀಪ್, ಸ್ಕಾರ್ಪಿಯೋ ಸಾಕ್ಷ್ಯ
>ರೇಣುಕಾ ಕರೆತಂದ ಇಟಿಯೋಸ್ ಸಾಕ್ಷ್ಯ


Share to all

You May Also Like

More From Author