ನವದೆಹಲಿ: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-2022 ವಿಜೇತರ ಹೆಸರನ್ನು ಇಂದು ಪ್ರಕಟಿಸಿತು. ಕನ್ನಡ ನಟ ರಿಷಬ್ ಶೆಟ್ಟಿ ಬೆಸ್ಟ್ ಆ್ಯಕ್ಷರ್ ಆಗಿ ಹೊರಹೊಮ್ಮಿದ್ದಾರೆ. ಅತ್ಯುತ್ತಮ ಮನರಂಜನಾ ಚಿತ್ರವೆಂಬ ಹೆಗ್ಗಳಿಕೆಗೆ ‘ಕಾಂತಾರ’ ಪಾತ್ರವಾಗಿದೆ.
ಹೊಂಬಾಳೆ ಸಂಸ್ಥೆ ನಿರ್ಮಾಣದ ಅತ್ಯುತ್ತಮ ಮನರಂಜನಾ ಚಿತ್ರ ‘ಕಾಂತಾರ’, ಮತ್ತು ‘ಕಾಂತಾರ’ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ರಿಷಬ್ ಶೆಟ್ಟಿಗೆ ಸಿಕ್ಕಿದೆ. ಅಂದಹಾಗೆ, 2020ನೇ ವರ್ಷದಲ್ಲಿ ಸೆನ್ಸಾರ್ ಆದ ಸಿನಿಮಾಗಳಿಗೆ ಇಂದು ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿದ್ದು,
ಅತ್ಯುತ್ತಮ ಪ್ರಾದೇಶಿಕ ಸಿನಿಮಾ, ಅತ್ಯುತ್ತಮ ಸಾಹಸ ನಿರ್ದೇಶನ ‘ಕೆಜಿಎಫ್ 2’ಗೆ ಸಿಕ್ಕಿದೆ. ಇನ್ನೂ ‘ಮಧ್ಯಂತರ’ ಸಿನಿಮಾಗಾಗಿ ಬೆಸ್ಟ್ ಡೆಬ್ಯೂ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಸಿಕ್ಕಿದೆ. ಅತ್ಯುತ್ತಮ ಸಂಕಲನಕ್ಕಾಗಿ ಸುರೇಶ್ ಅರಸ್‌ಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ. ಒಟ್ಟು ಕನ್ನಡಕ್ಕೆ 6 ಪ್ರಶಸ್ತಿಗಳು ಸಿಕ್ಕಿದೆ.