ಹೊಸ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ಸ್ಟಾರ್ ನಟನಿಗೆ ಏನಾಯ್ತು? ಹೇಗಿದೆ ಮೋಹನ್‌ ಲಾಲ್ ಆರೋಗ್ಯ ಸ್ಥಿತಿ!

Share to all

ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ಆರೋಗ್ಯ ತೊಂದರೆ ಕಾರಣ ಮಲಯಾಳಂನ ಸ್ಟಾರ್‌ ನಟ ಮೋಹನ್‌ ಲಾಲ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಸಿರಾಟದ ಸೋಂಕಿನಿಂದ ಈ ರೀತಿ ಆಗಿದೆ ಎಂದು ವೈದ್ಯರು ತಿಳಿಸಿದ್ದು, ಜ್ವರ ಮತ್ತು ಉಸಿರಾಟದ ತೊಂದರೆಯಿಂದ ನಟ ಮೋಹನ್ ಲಾಲ್ ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದರು.

ಮೋಹನ್‌ಲಾಲ್‌ ಹೀಗೆ ಆಸ್ಪತ್ರೆ ಸೇರುತ್ತಿದ್ದಂತೆ, ಅವರ ಅಪಾರ ಅಭಿಮಾನಿಗಳು ಕೆಲ ಕಾಲ ಆತಂಕಕ್ಕೆ ಒಳಗಾದರು. ಬಳಿಕ ಆಸ್ಪತ್ರೆಯಿಂದ ಅಧಿಕೃ ಹೆಲ್ತ್‌ ಬುಲಿಟಿನ್‌ ಬಿಡುಗಡೆ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ನೀಡಿದೆ. 64 ವರ್ಷ ವಯಸ್ಸಿನ ಮೋಹನ್ ಲಾಲ್ ಅವರಿಗೆ ಐದು ದಿನಗಳವರೆಗೆ ವಿಶ್ರಾಂತಿಗೆ ತಿಳಿಸಲಾಗಿದೆ. ಸಾರ್ವಜನಿಕ ಭೇಟಿ ತಪ್ಪಿಸಲು ಮತ್ತು ಸೂಚಿಸಲಾದ ಔಷಧಿ ಸೂಚನೆ ಅನುಸರಿಸಲು ಸಲಹೆ ನೀಡಲಾಗಿದೆ.

ಕಳೆದೆರಡು ವಾರದಿಂದ ಗುಜರಾತ್​​ನಲ್ಲಿ ಎಲ್​2 ಎಂಪುರಾನ್ ಸಿನಿಮಾದ ಶೂಟಿಂಗ್ ಮಾಡುತ್ತಿದ್ದ ನಟ ಇದೀಗ ದಿಢೀರ್ ಕೊಚ್ಚಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಮೃತಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಜರಾತ್​ನಲ್ಲಿ ಎಲ್​2 ಎಂಪುರಾನ್ ಶೂಟಿಂಗ್ ಮುಗಿಸಿದ್ದ ಮೋಹನ್ ಲಾಲ್, ಬಳಿಕ ತಾವೇ ನಿರ್ದೇಶಿಸ್ತಿರೋ ಬರೂಜ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿದ್ರು. ಬಳಿಕ ಗುಜರಾತ್​ನಿಂದ ಕೊಚ್ಚಿಗೆ ವಾಪಸ್ ಬಂದಿದ್ದರು.

ಈ ವೇಳೆ ಜ್ವರ, ಮೈಕೈನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮೋಹನ್ ಲಾಲ್ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಸ್ಥಿರವಾಗಿದ್ದು ಐದು ದಿನಗಳ ಕಾಲ ಮೋಹನ್ ಲಾಲ್ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿದೆ.

ಇನ್ನೂ ʻಬರೋಜ್ʼ ಚಿತ್ರವು ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ. ಇದು ನಟನ ಮೊದಲ ನಿರ್ದೇಶನದ ಸಿನಿಮಾ. ಈ ಚಲನಚಿತ್ರವನ್ನು ಆರಂಭದಲ್ಲಿ ಮಾರ್ಚ್ 28, 2024 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಬರೋಜ್ʼ ಸಿನಿಮಾವನ್ನು ಮೋಹನ್ ಲಾಲ್‌ ಅವರೇ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕರಾಗಿಯೂ ನಟಿಸಿದ್ದಾರೆ.


Share to all

You May Also Like

More From Author