ಬೆಂಗಳೂರು : ವಿವಾಹಿತ ಮಹಿಳೆಯ ಸ್ನೇಹ ಬೆಳೆಸಿದ ಯುವಕನಿಗೆ ಆಕೆಯ ಸಹೋದರ ಹಾಗೂ ಪತಿ ಸೇರಿ ಚಾಕು ಇರಿದಿರುವ ಘಟನೆ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಪಂತರಪಾಳ್ಯದಲ್ಲಿ ನಡೆದಿದೆ. ಆಗಸ್ಟ್ 19ಎಂದು ರಾತ್ರಿ ಘಟನೆ ನಡೆದಿದ್ದು, ಹೊಸಗುಡ್ಡದಹಳ್ಳಿ ನಿವಾಸಿಯಾಗಿರುವ ಕಾರ್ತಿಕ್ (25) ಚಾಕು ಇರಿತಕ್ಕೊಳಗಾದ ಯುವಕ. ಆರೋಪಿಗಳಾದ ವಿನೋದ್, ಸತೀಶ್ ಹಾಗೂ ಸೂರ್ಯ ಕೃತ್ಯದ ಬಳಿಕ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಪೋಟೊದಲ್ಲಿ ಕಾಣುವ ವ್ಯಕ್ತಿಯ ಹೆಸರು ಕಾರ್ತಿಕ್ ವೃತ್ತಿಯಲ್ಲಿ ಡ್ರೈವರ್ ,ಬ್ಯಾಟರಾಯನಪುರದ ಹಳೆಗುಡದಹಳ್ಳಿಯಲ್ಲಿ ತಾಯಿ ತಮ್ಮ,ಅಕ್ಕನ ಜೊತೆ ವಾಸ ಮಾಡಿಕೊಂಡಿದ್ದ ,ಹೀಗೆ ಇರಬೇಕಾದ್ರೆ ಒಂದು ವಿವಾಹಿತ ಮಹಿಳೆಯ ಪರಿಚಯ ಆಗಿದೆ ಅದು ನಂಬರ್ ಎಕ್ಸಚೆಂಜ್ ಆಗಿ ಗಂಟೆ ಗಟ್ಟಲೆ ಮಾತನಾಡುವ ವರೆಗೂ ಹೋಗಿದೆ ಇದು ಆಕೆಯ ಗಂಡ ಸತೀಶ್ ನಿಗೆ ಗೊತ್ತಾಗಿ ಕಾರ್ತಿಕ್ ಗೆ ವಾರ್ನಿಂಗ್ ಮಾಡಿದ್ದಾನೆ .ಇನ್ಮುಂದೆ ನನ್ನ ಹೆಂಡತಿ ತಂಟೆಗೆ ಬಂದ್ರೆ ಪರಿಣಾಮ ನೆಟ್ಟಿಗಿರೋದಿಲ್ಲ ಎಂದು ಹೇಳಿದ್ದಾನೆ. ಸಾಲದಕ್ಕೆ ಕಾರ್ತಿಕ್ ಮನೆಯವರು ಕೂಡ ಬುದ್ದಿ ಹೇಳಿ ದ್ದಾರೆ ಬೇರೆಯವರ ಸಂಸಾರದಲ್ಲಿ ಎಂಟ್ರಿ ಆಗೋದು ತಪ್ಪು ನಿನಗೆ ಬೇರೆ ಮದುವೆ ಮಾಡುತ್ತೇವೆ ಆಕೆಯ ಸಹವಾಸ ಬಿಟ್ಟುಬಿಡ ಎಂದಿದ್ರಂತೆ.
ಅದ್ಯಾಕೋ ಕಾರ್ತೀಕ್ ಗೆ ಈ ಯಾವ ಒಳ್ಳೆ ಮಾತುಗಳು ಕೇಳಸಲಿಲ್ಲ. ಅತ್ತ ಮಹಿಳೆಯ ಗಂಡ ಸತೀಶ್, ಆವನ ಬಾವೈದ ಸೂರ್ಯ, ಹಾಗೂ ಸ್ನೇಹಿತ ವಿನೋದನ ಬಳಿ ಹೇಳಿಕೊಂಡಿದ್ದಾನೆ .ಅಕ್ಕನ ಸಂಸಾರ ವಿಲನ್ ಆಗ್ತಿರುವ ಕಾರ್ತಿಕ್ ಗೆ ಒಂದು ಗತಿ ಕಾಣಿಸಬೇಕು ಅಂತ ಸ್ಕೆಚ್ ಆಗಿಯೇ ಬಿಟ್ರು.ಎರಡು ದಿನಗಳ ಹಿಂದೆ ಮಾತಾಡೋಣ ,
ಪಾರ್ಟಿ ಇದೆ ಬಾ ಎಂದು ನಾಯಂಡಹಳ್ಳಿ ಸಮೀಪದ ಪಂತರಪಾಳ್ಯದ ಕ್ವಾರ್ಟಸ್ ಗೆ ಕರೆಸಿಕೊಂಡು ಕಿರಿಕ್ ತೆಗೆದು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಪಕ್ಕದ ಬಿಲ್ಡಿಂಗ್ ಗೆ ಜಂಪ್ ಮಾಡಿದ್ದಾನೆ .ಅಷ್ಟೋತ್ತಿಗೆ ಪೋಲಿಸರು ಬಂದು ರೆಸ್ಕೂ ಮಾಡಿದ್ದಾರೆ. ಗಲಾಟೆ ಮಾಡದಂತೆ ಸ್ಥಳೀಯರು ಹೇಳಿದ್ರು ಕ್ಯಾರೇ ಎನ್ನದೆ ಮನಸೋಹಿಚ್ಚೆ ಹಲ್ಲೆ ಮಾಡಿದ್ದಾರೆ.ಬ್ಯಾಟರಾಯನಪುರ ಪೊಲೀಸ್ ಠಾಣೆ ಯಲ್ಲಿ ಪ್ರಕಾರಣ ದಾಖಲಿಸಿ ತನಿಖೆ ಮುಂದುವರೆದಿದೆ..