!!!ಹುಬ್ಬಳ್ಳಿ ಸ್ಪಾ ದಂಧೆ ಅಸಲಿ ಕಹಾನಿ ಏನು ಗೊತ್ತಾ?
ಬೆನ್ನಿಗೆ ನಿಂತವರು ಯಾರು? ಟ್ರೇಡ್ ಲೈಸನ್ಸ್ ಅಧಿಕಾರ ಚೇಂಜ್ ಆಗತ್ತಾ.!!!
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಪಾ ಮಸಾಜ್ ಸೆಂಟರ್ ಗಳ ದಂಧೆ ವ್ಯಾಪಕ ವಾಗಿ ನಡೆಯುತ್ತಲೇ ಇದೆ.ಇವುಗಳು ಅನೈತಿಕ ಚಟುವಟಕೆಗಳ ತಾಣಗಳು ಎಂದು ಹಲವರು ದ್ವನಿ ಕೂಡ ಎತ್ತಿದ್ದರು. ಆದ್ರೆ ಕಾಂಗ್ರೆಸ್ ಮುಖಂಡರೊಬ್ಬರು ಕೃಪಾಶೀರ್ವಾದ ಜೊತೆಗೆ ಕಾಂಗ್ರೆಸ್ ಪಾಲಿಕೆ ಸದಸ್ಯರ ಪಾಲುದಾರಿಕೆ ಯಿಂದ ಇದೀಗ ಮತ್ತೆ ಸ್ಪಾ ಹೆಸರಿನಲ್ಲಿ ವೈಶ್ಯವಾಟಿಕೆ ಎಗ್ಗಿಲ್ಲದೆ ನಡೆಯುತ್ತಲೇ ಇದೆ
ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದ್ದ ಆರೋಗ್ಯ ಅಧಿಕಾರಿಗಳನ್ನು ಕಾಂಗ್ರೆಸ್ ಪಾಲಿಕೆ ಓರ್ವ ಸದಸ್ಯೆ ಕಂಟ್ರೋಲ್ ಮಾಡುತ್ತಿದ್ದಾರೆ ಅಂತೆ ಅಲ್ಲದೆ ಲೈಸೆನ್ಸ್ ನೀಡಬೇಕಾದರೆ ತಮಗೆ ಪ್ರಸಾದ ಮುಟ್ಟಿಸಿ ನಂತರವೇ ತೆರಳಬೇಕು ಎನ್ನುವ ನಿಯಮ ಇದೀಗ ಜಾರಿಯಾಗಿದೆ
ಅಲ್ಲದೆ ಉತ್ತರ ಭಾರತದ ಹೆಣ್ಣು ಮಕ್ಕಳನ್ನು ಸ್ಪಾ ಗಳಿಗೆ ಸಪ್ಲೈ ಮಾಡುವ ಓರ್ವ ಹಪ್ತಾ ವಸೂಲಿ ಮಾಡಿ ಪೊಲೀಸ್,ಆರೋಗ್ಯ,ಪಾಲಿಕೆ ಹಾಗೂ ಓರ್ವ ಕಾಂಗ್ರಸ್ ಮುಖಂಡನಿಗೆ ತಲುಪಿಸಿ ಹುಬ್ಬಳ್ಳಿಯನ್ನು ವೈಶ್ಯಾವಟಿಕೆ ತಾಣ ಮಾಡಲು ಸಕಲ ತಯಾರಿಯನ್ನು ಇದೀಗ ಇದೆ ತಂಡ ತೆಗೆದುಕೊಂಡಿದ್ದು ಪೊಲೀಸ್ ಉನ್ನತ ಅಧಿಕಾರಿಗಳು ಕೂಡ ಗಮನ ಹರಿಸುತ್ತಿಲ್ಲ
ಇನ್ನು ಮುಖ್ಯವಾಗಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆ, ಗೋಕುಲ್ ರಸ್ತೆ ಪೊಲೀಸ್ ಠಾಣೆ, ಹಾಗೂ ಕೇಶ್ವಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ಸ್ಪಾ ಮಸಾಜ್ ಸೆಂಟರ್ ಮೂಲಕ ಹೈ ಟೆಕ್ ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದು.
ಈ ಬಗ್ಗೆ ಸಾಕ್ಷಿ ಸಮೇತ ಕೆಲವೇ ದಿನಗಳಲ್ಲಿ 10 ಸ್ಪಾ ಸೆಂಟರ್ ಗಳಲ್ಲಿ ನಡೆಯುತ್ತಿರುವ ಕರಾಳ ದಂಧೆಯನ್ನು ಉದಯ ವಾರ್ತೆ ಬಯಲು ಮಾಡಲಿದೆ
ಉದಯ ವಾರ್ತೆ ಹುಬ್ಬಳ್ಳಿ