ಚಾಲೆಂಜಿಂಗ್ ಸ್ಟಾರ್ ದರ್ಶನ್ʼಗೆ ಮತ್ತಷ್ಟು ಸಂಕಷ್ಟ..! A2ನಿಂದ A1 ಮಾಡಿ ಚಾರ್ಜ್ʼಶೀಟ್ ಸಲ್ಲಿಕೆಗೆ ತಯಾರಿ

Share to all

ಸ್ಯಾಂಡಲ್‌ವುಡ್‌ ನಟ ದರ್ಶನ್ ಜೈಲು ಸೇರಿ ತಿಂಗಳ ಮೇಲೆ ಆಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಸುಮಾರು 200 ಕ್ಕೂ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಿದ್ದು ಅವುಗಳಲ್ಲಿ ಸಾಂಧರ್ಭಿಕ ಸಾಕ್ಷಿಗಳು, ಡಿಜಿಟಲ್ ಸಾಕ್ಷಿಗಳು, ಸಿಸಿಟಿವಿ ಫುಟೇಜ್​ಗಳು ಇನ್ನೂ ಕೆಲವು ಹಲವು ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ.

ಕೊಲೆ ಕೇಸಿನ ತನಿಖೆ ವೇಳೆ ದರ್ಶನ್ ಎ2 ಆರೋಪಿಯನ್ನಾಗಿ ಮಾಡಲಾಗಿತ್ತು. ಎ1 ಆರೋಪಿಯನ್ನಾಗಿ ಪವಿತ್ರಾಗೌಡರನ್ನ ಹೆಸರಿಸಲಾಗಿತ್ತು. ತನಿಖೆ ಮುಗಿದು ಚಾರ್ಜ್ ಶೀಟ್ ಸಲ್ಲಿಕೆಯ ಸಿದ್ಧತೆಯಲ್ಲಿ ಎ2 ಇಂದ ಎ1 ಗೆ ಬಡ್ತಿ ನೀಡಲು ಸಿದ್ಧತೆಗಳು ಆರಂಭವಾಗಿದ್ದು, ಇದು ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡೋದು ಫಿಕ್ಸ್ ಆಗಿದೆ ಎಂದು ಪೊಲೀಸರ ಆಪ್ತ ಮೂಲಗಳಿಂದ ತಿಳಿದುಬಂದಿದೆ. ದರ್ಶನ್ ಎ1 ಆರೋಪಿ ಮಾಡಲು ಕಾರಣಗಳು ಇಲ್ಲಿವೆ.

ಆ ಮಹಾ ಕಾರಣಗಳು ಏನು?
* ದರ್ಶನ್‌ನಿಂದಲೇ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಲು ಸೂಚನೆ
* ಚಿತ್ರದುರ್ಗದ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಡೀಲ್
* ಡೀಲ್ ಬಳಿಕ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ ಆರ್.ಆರ್ ನಗರದ ಪಟ್ಟಣಗೆರೆಯ ಶೆಡ್‌ಗೆ ಕರೆತರಲಾಗಿತ್ತು
* ಶೆಡ್ ನಲ್ಲಿ ದರ್ಶನ್‌ನಿಂದ ಬೆಲ್ಟ್ ಲಾಠಿ ಹಾಗೂ ಕಬ್ಬಿಣದ ರಾಡ್ ನಿಂದ ಹಲ್ಲೆ
* ರೇಣುಕಾಸ್ವಾಮಿಯ ಮೇಲೆ ಸಿಕ್ಕ ಸಿಕ್ಕ ಕಡೆ ಒದ್ದಿದ್ದ ದರ್ಶನ್
* ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಬಳಿಕ ಶವ ವಿಲೇವಾರಿಗೆ ಪ್ಲ್ಯಾನ್‌
* ಶವ ವಿಲೇವಾರಿ ಮಾಡುವಂತೆ ಪ್ರದೋಷ್ ಗೆ 30 ಲಕ್ಷ ಹಣ ಕೊಟ್ಟಿದ್ದ ದರ್ಶನ್
* ಕೊಲೆ ಮಾಡಿದ ಸ್ಪಾಟ್ ನಲ್ಲಿ ಸಿಸಿಟಿವಿ ಡಿವಿಆರ್ ನಲ್ಲಿನ ವೀಡಿಯೊ ಅಳಿಸಿ ಹಾಕಿ ಸಾಕ್ಷಿ ನಾಶದ ಯತ್ನ
* ಪ್ರಮುಖ ಸೂತ್ರಧಾರನೆ ದರ್ಶನ್ ಆದ್ರಿಂದ ಎ1 ಆರೋಪಿ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


Share to all

You May Also Like

More From Author