ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸದ್ಯ ಪ್ರಕರಣದಲ್ಲಿ A2 ಆಗಿರೋ ದರ್ಶನ್ ಅವರು ಆರೋಪಿ ನಂ.1 ಆಗೋ ಸಾಧ್ಯತೆ ಹೆಚ್ಚಾಗಿದೆ. ಪೊಲೀಸರ ತನಿಖೆ ವೇಳೆ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರೋ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ.
ಇದರ ಬೆನ್ನಲ್ಲೇ ದರ್ಶನ್ ಜೈಲು ಸೇರಿ ಮೂರು ತಿಂಗಳಗಳ ಬಳಿಕ ರಚಿತಾ ರಾಮ್ ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದಾರೆ. ಮೂರು ಬ್ಯಾಗ್ಗಳ ಮೂಲಕ ಜೈಲಿಗೆ ಆಗಮಿಸಿದ ರಚಿತಾ, ದರ್ಶನ್ ಆಪ್ತ ಸಚ್ಚಿದಾನಂದ್ ಜೊತೆಗೆ ಜೈಲಿಗೆ ಆಗಮಿಸಿದ್ದರು. ದರ್ಶನ್ ನನ್ನ ಗುರು ಅಂತ ಇತ್ತೀಚಿಗೆ ಒಂದು ಪೋಸ್ಟ್ನಲ್ಲಿ ತಿಳಿಸಿದ್ದ ರಚಿತಾ, ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿರೋದು ನಂಬಲು ಕಷ್ಟ ಸಾಧ್ಯ ಎಂದು ತಿಳಿಸಿದ್ದರು.