ಅಫೀಮು ಮಾರಾಟ ಮಾಡುತ್ತಿದ್ದ ಮೂವರು ಅಂತರಾಜ್ಯ ಪೆಡ್ಲರ್ ಗಳ ಬಂಧನ.
ಹುಬ್ಬಳ್ಳಿ:-ಹಳೇಹುಬ್ಬಳ್ಳಿಯ ತಿಮ್ಮಸಾಗರ ರಸ್ತೆಯ ಪಾಳು ಬಿದ್ದ ಕಟ್ಟಡವೊಂದರಲ್ಲಿ ಅಫೀಮ್ ಮಾರಾಟ ಮಾಡುತ್ತಿದ್ದ ಆರೋಪಿಗಳ ಮೇಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ PI ನೇತೃತ್ವದ ತಂಡವು ದಾಳಿ ಮಾಡಿ ರಾಜಸ್ಥಾನ ಮೂಲದ ವಿಕಾಸ್ ಬಿಷ್ಣೊಯ್, ಜೈಸಾರಾಮ್ ಚೌದರಿ, ರಾಮರಾಮ ಬಿಷ್ಣೊಯ್ ಎಂಬ 03 ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರಿಂದ 23,500/-ರೂ ಮೌಲ್ಯದ 46 ಗ್ರಾಂ ಅಫೀಮು, ಒಂದು ದ್ವಿಚಕ್ರ ವಾಹನ, ಮೂರು ಮೊಬೈಲ್ ಗಳು, ಸೇರಿದಂತೆ ಒಟ್ಟು 1,29,500/- ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿರುತ್ತಾರೆ.