ಭೀಕರ ರಸ್ತೆ ಅಪಘಾತ. ಓಮಿನಿ ಕಾರಿನಲ್ಲಿದ್ದ ಆರು ವರ್ಷದ ಮಗು ಸೇರಿ ಮೂವರ ಸಾವು.ಹಲವರಿಗೆ ಗಂಭೀರ ಗಾಯ.
ಹುಬ್ಬಳ್ಳಿ:-ಓಮಿನಿ ಕಾರಿನ ಟೈರ್ ಬ್ಲಾಸ್ಟ್ ಆದ ಪರಿಣಾಮ ಮುಂದೆ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓಮಿನಿ ಕಾರಿನಲ್ಲಿದ್ದ ಒಂದು ಮಗು ಸೇರಿ ಮೂವರು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಸಮೀಪ ಕಿರೇಸೂರ ಗ್ರಾಮದ ಬಳಿ ನಡೆದಿದೆ.
ಮೃತರು ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದ ನಿವಾಸಿಗಳು.
ಅಲ್ಲದೇ ಮೃತರೆಲ್ಲ ಒಂದೇ ಕುಟುಂಬದವರು.
ಜಾಫರಸಾಬ ಮಂಗಳೂರು (60) ಮುಸ್ತಫಾ (ಸಾಹೇಬ) ಮಂಗಳೂರು (36) ಶೊಹೇಬ್ ಮಂಗಳೂರು (06) ಮೃತ ದುರ್ದೈವಿಗಳು.
ಇನ್ನೂ ಮೂವರು ಗಾಯಗೊಂಡವರಿಗೆ ಧಾರವಾಡದ ಎಸ್‌ಡಿಎಮ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.