ಅಪ್ಪ ಅಂದರೆ ಮಗನಿಗೆ ಪ್ರಾಣ..ಅಪ್ಪನ ಪ್ರಾಣ ಉಳಿಸಲು ಹೋಗಿ ಪ್ರಾಣ ಕಳಕೊಂಡ ಮಗ.ಮಗನ ಜೊತೆಗೆ ಮೊಮ್ಮಗನನ್ನು ಕರಕೊಂಡು ಹೋದ ಅಜ್ಜ..
ಹುಬ್ಬಳ್ಳಿ:-ಹೌದು ಇಂದು ಮದ್ಯ ರಾತ್ರಿ ಹುಬ್ಬಳ್ಳಿ ಸಮೀಪ ಕಿರೇಸೂರ ಬಳಿ ನಡೆದ ಭೀಕರ ಅಪಘಾತ ಪ್ರಕರಣದಲ್ಲಿ ಅಜ್ಜ,ಅಪ್ಪ,ಮೊಮ್ಮಗ ಪ್ರಾಣ ಕಳೆದುಕೊಂಡ ಧಾರುಣ ಘಟನೆಯ ಹಿಂದೆ ಅಪ್ಪ ಮಗನ ಭಾಂದವ್ಯದ ಸ್ಟೋರಿ ಅಡಗಿದೆ.
ಅಪ್ಪ ಜಾಫರಸಾಬ ಮಂಗಳೂರ ಅವನಿಗೆ ಕೆಲ ದಿನಗಳ ಹಿಂದೆ ಲಕ್ವಾ (ಪಾರ್ಸಿ) ಹೊಡೆದಿತ್ತು.ಅಪ್ಪನಿಗೆ ಔಷಧ ಕೊಡಿಸಲು ಕಾರವಾರದ ಹತ್ತಿರ ಹಲಗಾ ಗ್ರಾಮಕ್ಕೆ ಮಗ ಮುಸ್ತಫಾ ಕರೆದುಕೊಂಡು ಹೋಗಿದ್ದರು.ಜೊತೆಗೆ ಮೊಮ್ಮಗ ಶೋಹೆಬ್ ನನ್ನು ಕರೆದುಕೊಂಡು ಹೋಗಿದ್ದರು.
ಹಲಗಾ ಗ್ರಾಮದಲ್ಲಿ ಅಪ್ಪನಿಗೆ ಔಷಧ ಕೊಡಿಸಿಕೊಂಡು ವಾಪಸ್ಸು ಕೊಪ್ಪಳ ಕಡೆ ಹೊರಟವರು ಹೆಬಸೂರಲ್ಲಿ ಸಂಬಂಧಿಕರನ್ನು ಭೇಟಿಯಾಗಿ ಹೋಗೋಣ ಅಂತಾ ಹೊರಟಿದ್ದರು.ಇನ್ನೊಂದು ಹತ್ತು ನಿಮಿಷ ಆಗಿದ್ದರೆ ಹೆಬಸೂರ ಗ್ರಾಮದ ಸಂಭಂಧಿಕರ ಮನೆ ತಲುಪುತ್ತಿದ್ದರು.ಆದರೆ ವಿಧಿಯಾಟ ಅವರನ್ನು ಕಿರೇಸೂರ ಬಳಿಯೇ ಕರೆದುಕೊಂಡಿತು.