ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ನಟ ದರ್ಶನ್ ಅರೆಸ್ಟ್ ಆದ ಮೇಲೆ ಅಭಿಮಾನಿಗಳು ಭಾರೀ ಬೇಸರದಲ್ಲಿ ಇದ್ದಾರೆ. ನಿತ್ಯ ದರ್ಶನ್ ರಿಲೀಸ್ಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಕೆಲವು ಅಭಿಮಾನಿಗಳು ಅಂತೂ ಹೋಮ ಮಾಡಿಸಿದ್ದು ಉಂಟು. ಇದರ ನಡುವೆ ರ್ಶನ್ ಅವರ ಒಂದು ಫೋಟೋ ವೈರಲ್ ಆಗಿದೆ. ಅದರಲ್ಲಿ ಅವರು ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದೃಶ್ಯ ಸೆರೆಯಾಗಿದೆ.
ದರ್ಶನ್ ಅವರು ಸ್ಪೆಷಲ್ ಬ್ಯಾರಕ್ನಿಂದ ಹೊರಬಂದು, ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಕಾಫಿ ಮಗ್ ಹಿಡಿದುಕೊಂಡು ಅವರು ಕುಳಿತಿದ್ದಾರೆ. ಕೈಯಲ್ಲಿ ಸಿಗರೇಟ್ ಕೂಡ ಇದೆ. ಈ ಫೋಟೋ ವೈರಲ್ ಆಗಿದೆ. ಜೈಲಿನಿಂದ ಲೀಕ್ ಆಗಿರುವ ಫೋಟೋದಲ್ಲಿ ದರ್ಶನ್ ಅವರು ನಟೋರಿಯಸ್ ರೌಡಿಗಳ ಜೊತೆ ಕುಳಿತುಕೊಂಡಿದ್ದಾರೆ.
ದರ್ಶನ್ ಪಕ್ಕದಲ್ಲಿರೋದು ನಟೋರಿಯಸ್ ಕ್ರಿಮಿನಲ್ ವಿಲ್ಸನ್ ಗಾರ್ಡನ್ ನಾಗ. ವಿಲ್ಸನ್ ಗಾರ್ಡನ್ ನಾಗ ಬೆಂಗಳೂರು ದಕ್ಷಿಣ ವಿಭಾಗದ ರೌಡಿ ಶೀಟರ್. ವಿಲ್ಸನ್ ಗಾರ್ಡನ್ ನಾಗ ಒಂದು ತಿಂಗಳ ಹಿಂದಷ್ಟೇ ಸಿದ್ದಾಪುರ ಮಹೇಶ್ ಕೊಲೆ ಕೇಸ್‌ನಲ್ಲಿ ಕೋರ್ಟ್‌ಗೆ ಶರಣಾಗಿದ್ದ. ನಂತರ ಪೊಲೀಸರು ವಿಲ್ಸನ್ ಗಾರ್ಡನ್ ನಾಗನ ಮೇಲೆ ಕೋಕಾ ಕಾಯ್ದೆ ಹಾಕಿ ಜೈಲಿಗೆ ಕಳುಹಿಸಿದ್ದರು. ವಿಲ್ಸನ್ ಗಾರ್ಡನ್ ನಾಗನ ಜೊತೆ ಕುಳಿತಿರುವ ನಟ ದರ್ಶನ್ ಅವರು ಒಂದು ಕೈಯಲ್ಲಿ ಟೀ, ಒಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡಿದ್ದಾರೆ.