ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡುತ್ತಿರುವ ಫೋಟೋಗಳು, ವಿಡಿಯೋ ಕಾಲ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೈದಿಯೊಬ್ಬ ಜೈಲಿನ ಹೊರಗಿರುವ ವ್ಯಕ್ತಿಗೆ ವಿಡಿಯೋ ಕಾಲ್ ಮಾಡಿ, ದರ್ಶನ್ ಅವರಿಂದ ಹಾಯ್ ಹೇಳಿಸಿದ್ದಾನೆ. ಆ ವಿಡಿಯೋ ಈಗ ವೈರಲ್ ಆಗಿದೆ.
ಇನ್ನೂ ನಟಿ ರಚಿತಾ ರಾಮ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿನಟ ದರ್ಶನ್‌ನನ್ನು ಭೇಟಿಯಾಗಿದ್ದರು. ಅದೇ ದಿನವೇ ನಟ ದರ್ಶನ್ ಸಿಗರೇಟ್ ಪಾರ್ಟಿ ಮಾಡಿದರಾ ಎಂಬ ಅನುಮಾನ ಇದೀಗ ಗಟ್ಟಿಯಾಗುತ್ತಿದೆ.
ದರ್ಶನ್ ಸಿಗರೇಟ್- ಟೀ ಪಾರ್ಟಿಯ ಫೋಟೋ ತೆಗೆದವನು ರೌಡಿಶೀಟರ್ ವೇಲು ಎಂದು ಗೊತ್ತಾಗಿದೆ. ಇದನ್ನು ಆತ ಮೈಸೂರಿನಲ್ಲಿರುವ ದರ್ಶನ್ ಫ್ಯಾನ್ಸ್‌ಗೆ ಕಳಿಸಿದ್ದ. ಅಲ್ಲಿಂದ ಚಾಮರಾಜನಗರದ ಕ್ರೈಂ ಪೊಲೀಸ್ ಒಬ್ಬರಿಗೆ ಫೋಟೋ ತಲುಪಿತ್ತು. ಪೋಟೋ ಲೀಕ್ ಆಗದಂತೆ ತಡೆಯಲು ಲಕ್ಷಾಂತರ ರೂಪಾಯಿಯ ಡೀಲ್ ಸಹ ನಡೆದಿತ್ತು ಎಂದು ಗೊತ್ತಾಗಿದೆ.
ಆದರೆ ಫೋಟೋ ಲೀಕ್ ಆಗಿಯೇ ಬಿಟ್ಟಿದೆ. ಸೋರಿಕೆ ಆದ ಬೆನ್ನಲ್ಲೇ ಎಎಜಿ ಆನಂದ್ ರೆಡ್ಡಿ ಕೈದಿಗಳು ಹಾಗೂ ಅಧಿಕಾರಿಗಳನ್ನು ತಡರಾತ್ರಿವರೆಗೂ ವಿಚಾರಣೆ ನಡೆಸಿದ್ದಾರೆ. ತನಿಖೆ ನಡೆಸಿ ಪ್ರಕರಣದ ಬಗ್ಗೆ ಡಿಜಿಗೆ ವರದಿ ಸಲ್ಲಿಸಿದ್ದಾರೆ. ದರ್ಶನ್, ನಾಗ ಸಿಗರೇಟ್ ಪಾರ್ಟಿ ಮಾಡಿರುವ ಫೋಟೋ ಯಾವತ್ತಿನದು, ಯಾರು ಫೋಟೋ ತೆಗದದ್ದು ಎಂಬ ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕಿದ್ದಾರೆ.