ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಕಾಲಿವುಡ್ ನಟ ಬಿಜಿಲಿ ರಮೇಶ್ ಅವರು ಇಂದು ವಿಧಿವಶರಾಗಿದ್ದಾರೆ. ಚೆನ್ನೈನ ಎಂಜಿಆರ್ ನಗರದಲ್ಲಿರುವ ರುದ್ರಭೂಮಿಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಿಜಿಲಿ ರಮೇಶ್ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಪಾರ್ಶ್ವವಾಯುಗೆ ಒಳಗಾಗಿ ಹಾಸಿಗೆ ಹಿಡಿದಿದ್ದ ನಟ. ಮೇಲೆ ಏಳಲು ಆಗದ ಸ್ಥಿತಿ ತಲುಪಿದ್ರು. ಬಿಜಿಲಿ ರಮೇಶ್ ಇತ್ತೀಚೆಗೆ ಕೆಲವು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದರು. ನಾನು ಒಂದೇ ಸ್ಥಳದಲ್ಲಿ ನಿಲ್ಲುವುದಿಲ್ಲ, ನಾನು ಬಡಿಯುತ್ತಲೇ ಇರುತ್ತೇನೆ. ಮದುವೆಗೂ ಮುನ್ನ ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ ಮತ್ತು ಅತಿಯಾದ ಮದ್ಯಪಾನದಿಂದ ನಾನು ಈಗ ಅನಾರೋಗ್ಯ ಪೀಡಿತನಾಗಿದ್ದೇನೆ.
ಪಾರ್ಶ್ವವಾಯುವಿಗೆ ಒಳಗಾಗಿ ಮೂಲೆ ಸೇರಿದ್ದೇನೆ ಎಂದ್ರು. ನನ್ನನ್ನು ನೋಡಿ ಕೆಟ್ಟ ಚಟಗಳನ್ನು ಬಿಟ್ಟುಬಿಡಿ ಎಂದು ಅವರ ಇತ್ತೀಚಿನ ಸಂದರ್ಶನದಲ್ಲಿ ಅಭಿಮಾನಿಗಳಿಗೆ ಸಲಹೆ ನೀಡಿದ್ರು. ಇಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಅಂದಹಾಗೆ, ಸಿನಿಮಾದಲ್ಲಿ ಪೋಷಕ ಪಾತ್ರಗಳು ಮತ್ತು ಯೂಟ್ಯೂಬ್‌ನಲ್ಲಿ ಪ್ರ್ಯಾಂಕ್ ವಿಡಿಯೋಗಳನ್ನು ಮಾಡಿ ಫೇಮಸ್ ಆಗಿದ್ದ ಬಿಜಿಲಿ ರಮೇಶ್ ಅವರು ಕುಡಿತದ ಚಟಕ್ಕೆ ದಾಸರಾಗಿದ್ದರು. ಇದರಿಂದ ಲಿವರ್‌ಗೆ ಸಂಬಂಧಿಸಿದ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಆರ್ಥಿಕವಾಗಿಯೂ ನಟ ಸಂಕಷ್ಟದಲ್ಲಿದ್ದರು.