ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇದರ ಬೆನ್ನಲ್ಲೇ ನಟ ಚಿಕ್ಕಣ್ಣಗೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಬಸವೇಶ್ವರ ನಗರ ಠಾಣೆಗೆ ಹಾಜರಾದ ನಟ ಚಿಕ್ಕಣ.
ಪ್ರಕರಣದಲ್ಲಿ 164 ಸಾಕ್ಷಿ ಹೇಳಿದ್ದ ಚಿಕ್ಕಣ್ಣ ಸಾಕ್ಷಿ ಹೇಳಿದ್ರು ಜೈಲಿನಲ್ಲಿ ಆರೋಪಿ ದರ್ಶನ್ ನ ಭೇಟಿ ಮಾಡಿದ್ರು.ಈ ಹಿನ್ನೆಲೆ ತನಿಖಾಧಿಕಾರಿ ಎಸಿಪಿ ಚಂದನ್ ನಟ ಚಿಕ್ಕಣ್ಣಗೆ ನಿನ್ನೆ ತಡರಾತ್ರಿ ನೋಟೀಸ್ ಜಾರಿ ಮಾಡಿದ್ರು. ನೋಟೀಸ್ ಹಿನ್ನೆಲೆ ನಟ ಚಿಕ್ಕಣ್ಣ ಇಂದು ಮತ್ತೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ. ಬೆಳಿಗ್ಗೆ ಸುಮಾರು 9 ಗಂಟೆಗೆ ಎಸಿಪಿ ಮುಂದೆ ಹಾಜರಾಗಿದ್ದಾರೆ.
ಯಾವೆಲ್ಲ ಪ್ರಶ್ನೆಗಳನ್ನ ಚಿಕ್ಕಣ್ಣಗೆ ಕೇಳಲಿದ್ದಾರೆ ಗೊತ್ತಾ ಪೊಲೀಸರು
* ನಟ ದರ್ಶನ್ ಭೇಟಿ ಮಾಡಿದ ಕಾರಣ ಏನು…?
* ಭೇಟಿ ವೇಳೆ ಸಾಕ್ಷಿಯ ನುಡಿದ ಬಗ್ಗೆ ದರ್ಶನ್ ಕೇಳಿದ್ರಾ..?
* ದರ್ಶನ್ ಗೆ ನೀವು ನೀಡಿರುವ 164 ಹೇಳಿಕೆಯ ವಿವರ ಹೇಳಿದ್ರಾ.?
* ಸಾಕ್ಷಿ ನಡಿದಿರುವ ಬಗ್ಗೆ ದರ್ಶನ್ ಗೆ ಏನಾದ್ರು ಅಕ್ಷೇಪಣೆ ಇದೆ ಎಂದು ಹೇಳಿದ್ರಾ..?
ನಿನ್ನೆ ತಡರಾತ್ರಿ ಚಿಕ್ಕಣನಿಗೆ ಎಸಿಪಿ ಚಂದನ್ ನೋಟಿಸ್ ನೋಟೀಸ್ ಜಾರಿ ಮಾಡಿದ್ರು. ನೋಟೀಸ್ ಹಿನ್ನೆಲೆ ನಟ ಚಿಕ್ಕಣ್ಣ ಇಂದು ಮತ್ತೆ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಬೆಳಿಗ್ಗೆ ಸುಮಾರು 9 ಗಂಟೆಗೆ ಎಸಿಪಿ ಮುಂದೆ ಹಾಜರಾಗಿದ್ದಾರೆ.