ದರ್ಶನ್ʼಗೆ ಕಾಡ್ತಿದೆ ಕೈ, ಬೆನ್ನು ನೋವು: ಕೊನೆಗೂ ಸಾರಥಿಗೆ ಸಿಕ್ತು ಸರ್ಜಿಕಲ್ ಚೇರ್ ಭಾಗ್ಯ

Share to all

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ದರ್ಶನ್ ಅವರ ಮನವಿಗೆ ಜೈಲಾಧಿಕಾರಿಗಳು ಸ್ಪಂದಿಸಿದ್ದಾರೆ̤ ನಾರೋಗ್ಯದ ಕಾರಣದಿಂದಾಗಿ ತನಗೆ ಜೈಲಿನಲ್ಲಿ ಸರ್ಜಿಕಲ್ ಚೇರ್ ಬೇಕು ಎಂದು ಜೈಲು ಡಿಐಜಿಗೆ ದರ್ಶನ್ ಮನವಿ ಮಾಡಿಕೊಂಡಿದ್ದರು. ಮನವಿಯನ್ನು ಪುರಸ್ಕರಿಸಿರೋ ಡಿಐಜಿ ಸರ್ಜಿಕಲ್ ಚೇರ್ ಕೂಲಂಕುಷವಾಗಿ ಆರೋಗ್ಯ ತಪಾಸಣೆ ಹಾಗೂ ರಿಪೋರ್ಟ್ ಪರಿಶೀಲನೆ ಬಳಿಕ ಚೇರ್ ಕೊಡಲು ಅಸ್ತು ಎಂದಿದ್ದಾರೆ. ದರ್ಶನ್ ಆರೋಗ್ಯದ ಬಗ್ಗೆ ವೈದ್ಯರು ಕೊಟ್ಟ ವರದಿ ಬಳಿಕ ಕಾರಾಗೃಹ ಇಲಾಖೆ ಡಿಐಜಿ ಸರ್ಜಿಕಲ್ ಚೇರ್ ಅನ್ನು ನೀಡಿದ್ದಾರೆ.

ಅರ್ಥೋಪಿಡಿಕ್ ವೈದ್ಯರಿಂದ ತಪಾಸಣೆ ಹಾಗೂ ಪರಪ್ಪನ ಅಗ್ರಹಾರದಿಂದ ವರದಿ ತರಸಿಕೊಂಡು ಪರಿಶೀಲನೆ ಮಾಡಿರೋ ಡಿಐಜಿ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದರ್ಶನ್ ಗೆ ಸರ್ಜಿಕಲ್ ಚೇರ್ ತರಿಸಿ ಕೊಡಲಾಗಿದೆ. ಜಿಲ್ಲಾ ಆಸ್ಪತ್ರೆಯಿಂದ ಈಗಾಗಲೇ ಜೈಲಿಗೆ ಆ ಚೇರ್ ಬಂದಿದೆ. ದರ್ಶನ್ ಮನವಿ ಮೇರೆಗೆ ಮೆಡಿಕಲ್ ರಿಪೋರ್ಟ್ ಪರಿಸೀಲಿಸುವ ಜೊತೆಗೆ ಆರೋಗ್ಯ ತಪಾಸಣೆಯನ್ನೂ ವೈದ್ಯಾಧಿಕಾರಿಗಳು ಮಾಡಿದ್ದರು. ದರ್ಶನ್ ಗೆ ಸಮಸ್ಯೆ ಇರೋದನ್ನ ಕನ್ಫರ್ಮ್ ಮಾಡಿಕೊಂಡು ಸರ್ಜಿಕಲ್ ಚೇರ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ ಜೈಲಾಧಿಕಾರಿಗಳು.

ಬಳ್ಳಾರಿ ಜೈಲಿನಲ್ಲಿ ನಾಲ್ಕನೇ ದಿನದ ರಾತ್ರಿ ಕಳೆದಿರೋ ಕೊಲೆ ಆರೋಪಿ ದರ್ಶನ್, ಬೆಳಗ್ಗೆ ಎದ್ದು ಅರ್ಧಗಂಟೆ ವಾಕ್ ಮಾಡಿದ್ದಾರೆ. ಜೈಲಿನ ಮೆನು ಪ್ರಕಾರ ಇವತ್ತು ಟಮೋಟ್ ಬಾತ್ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ರಿಲಾಕ್ಸ್ ಮೂಡನಲ್ಲಿರೋ ದರ್ಶನ್, ಪತ್ನಿ ವಿಜಯಲಕ್ಷ್ಮಿ ಭೇಟಿ ಬಳಿಕ ನಿರಾಳರಾಗಿದ್ದರು.

 


Share to all

You May Also Like

More From Author