ಬೆಂಗಳೂರು: ಇಂದು ಅಭಿನಯ ಚಕ್ರವರ್ತಿ ಸುದೀಪ್ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳಲ್ಲಿ ಸೆಲೆಬ್ರೆಷನ್ ಜೋರಾಗಿದೆ. ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಇಂದು (ಸೆ.2)ರಂದು ತಮ್ಮ 51ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಮೂಲಕ 50 ಮುಗಿದು 51ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.
ಇನ್ನೂ ಜಯನಗರದ ಎಂಇಎಸ್ ಗ್ರೌಂಡ್‍ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಅವರು, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ, ಕ್ಯಾಮೆರಾ ನೋಡಿ ಇನ್ನೂ ಚಾಲ್ತಿಯಲ್ಲಿದೀವಿ ಎಂದು ಅನ್ಸುತ್ತೆ. ಅವ್ರು ತೋರಿಸೋ ಪ್ರೀತಿ ವ್ಯಕ್ತಿತ್ವದಿಂದ ನಾನು ಇಲ್ಲಿಯವರೆಗೆ ಬಂದಿದ್ದೇನೆ.
ಹೋದಲ್ಲೆಲ್ಲ ತಲೆ ಎತ್ಕೊಂಡು ನಿಲ್ತೀವಿ ಅಂದ್ರೆ ಅವ್ರೇ ಕಾರಣ, ಅವ್ರಿಗೆ ಕಳಂಕ ತರುವಂತ ಕೆಲಸ ಯಾವತ್ತೂ ಮಾಡೋದಿಲ್ಲ. ವ್ಯಕ್ತಿತ್ವದಲ್ಲಿ ದೊಡ್ಡವರಾಗ್ಬೇಕು ಅಂದ್ರೆ ಸಿನಿಮಾನೇ ಮಾಡ್ಬೇಕಾಗಿಲ್ಲ. ನನ್ನ ಅಕ್ಕ ಪಕ್ಕದವರು ಚನ್ನಾಗಿದ್ದಾರೆ, ನನ್ನ ಸರಿ ತಪ್ಪು ತಿದ್ದೋರು ಒಳ್ಳೆಯವ್ರಾಗಿದ್ದಾರೆ. ಹಾಗಾಗಿಯೇ ನಾನು ಇಲ್ಲಿಗೆ ಬಂದು ನಿಂತಿದ್ದೇನೆ ಎಂದು ಸನ್ಮಾರ್ಗ ತೋರಿದವರನ್ನು ಸ್ಮರಿಸಿದ್ದಾರೆ.
ಮ್ಯಾಕ್ಸ್ ಚಿತ್ರ ತಡವಾಯ್ತು, ಈ ವರ್ಷ ನಿಮ್ಮ ಮುಂದೇ ಬರಲಿದೆ. ನಾನು ನಿಮ್ಮ ಮೇಲೆ ತುಂಬಾ ಪ್ರೀತಿ ಇಟ್ಟಿದ್ದೇನೆ. ನಾವು ಬೆಳಗ್ಗೆ ಎದ್ದು ಮೇಕಪ್ ಮಾಡ್ಕಳ್ಳೋದೆ ನಿಮಗೋಸ್ಕರ. ಈಗಷ್ಟೇ 28 ದಾಟಿ 29ಕ್ಕೆ ಕಾಲಿಡ್ತಿದ್ದೀನಿ, ನಿಮ್ಮ ಆಶೀರ್ವಾದ ಬೆಂಬಲ ಹೀಗೆ ಇರಲಿ ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.