Darshan: ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ 8 ದಿನದಿಂದ ಮಾಡಿದ ಖರ್ಚು ಎಷ್ಟು ಗೊತ್ತಾ..?

Share to all

ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ ಆಗಿದೆ. ಚಾರ್ಜ್​ಶೀಟ್​ನಲ್ಲಿ ದರ್ಶನ್ ಪಾತ್ರ ಏನು ಎಂಬ ಬಗ್ಗೆ ವಿವರಣೆ ಇಡಲಾಗಿದೆ. ಇತ್ತ ದರ್ಶನ್ ಅವರು ಬಳ್ಳಾರಿಯಲ್ಲಿ ಸಿಂಪಲ್ ಜೀವನ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್ ಒಂಬತ್ತು ದಿನದಲ್ಲಿ 735 ರೂ. ಖರ್ಚು ಮಾಡಿದ್ದಾರೆ.

ಜೈಲಿನ ಕ್ಯಾಂಟೀನ್‌ನಲ್ಲಿ ಟೀ, ಕಾಫಿಗಾಗಿ ಖರ್ಚು ಮಾಡಿದ್ದಾರೆ. ಜೈಲಿನಲ್ಲಿ ಒತ್ತಡಕ್ಕೆ ಒಳಗಾಗಿರುವ ಆರೋಪಿ ದರ್ಶನ್ ಕಾಫಿ, ಟೀ ಮೊರೆ ಹೋಗಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲ್‌ನಲ್ಲಿರುವ ಆರೋಪಿ ದರ್ಶನ್ ಅವರ ಪ್ರೀಜ್‌ನರ್ಸ್ ಪ್ರೈವೇಟ್ ಅಕೌಂಟ್‌ನಲ್ಲಿದ್ದ ಹಣ ಖರ್ಚಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ 35,000 ರೂ. ಹಣ ದರ್ಶನ್ ಅವರ ಪಿಪಿಸಿ ಅಕೌಂಟ್‌ನಲ್ಲಿತ್ತು. ದರ್ಶನ್ ಬಳ್ಳಾರಿ ಜೈಲಿಗೆ ಬಂದ ಬಳಿಕ ಅದೇ ಹಣ ವರ್ಗಾವಣೆ ಆಗಿತ್ತು. ಇದೀಗ ಅದೇ ಹಣದಲ್ಲಿ ಕಾಫಿ, ಟೀ ಗಾಗಿ ಖರ್ಚು ಮಾಡಿದ್ದಾಗಿ ಜೈಲು ಕ್ಯಾಂಟೀನ್ ಮೂಲಗಳಿಂದ ಮಾಹಿತಿ ಸಿಕ್ಕಿದೆ.


Share to all

You May Also Like

More From Author