ರೈತರ ಸಮಸ್ಯೆಗಳಿಗೆ ಧ್ವನಿಯಾದ ಮಾಜಿ ಶಾಸಕ ನಾಗರಾಜ ಛಬ್ಬಿ – ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಈ ಕೂಡಲೇ ಪರಿಹಾರ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ ನಾಗರಾಜ ಛಬ್ಬಿ
ಧಾರವಾಡ –
ಅತಿಯಾದ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಕಲಘಟಗಿ,ಅಳ್ನಾವರ,ಮತ್ತು ಧಾರವಾಡ ಪ್ರದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಈ ಒಂದು ಭಾಗದಲ್ಲಿ ಈ ವರ್ಷ ಅತಿಯಾದ ಮಳೆಯಾಗಿದ್ದು ಬೆಳೆಗಳನ್ನು ಕಳೆದುಕೊಂಡಿದ್ದು ಇದರಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವನ್ನು ನೀಡುವಂತೆ ಒತ್ತಾಯಿಸಿ ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಒತ್ತಾಯಿಸಿದ್ದಾರೆ.ಈ ಒಂದು ಕುರಿತಂತೆ ಧಾರವಾಡ ಜಿಲ್ಲಾಧಿಕಾರಿಯವನ್ನು ಭೇಟಿಯಾದ ನಾಗರಾಜ ಛಬ್ಬಿ ನೇತ್ರತ್ವದಲ್ಲಿನ ರೈತರ ನಿಯೋಗವು ಮನವಿಯನ್ನು ನೀಡಿ ಸಮಸ್ಯೆಯನ್ನು ಗಮನಕ್ಕೆ ತಗೆದುಕೊಂಡು ಬಂದರು. ಕಲಘಟಗಿ,ಅಳ್ನಾವರ,ಧಾರವಾಡ ಭಾಗದ ರೈತರು ಮತ್ತು ರೈತ ಮುಖಂಡರು ಪಕ್ಷದ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿ ಈ ಕೂಡಲೇ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರವನ್ನು ನೀಡಿ ನೆರವಾಗುವಂತೆ ಒತ್ತಾಯವನ್ನು ಮಾಡಿದರು.ನಾಗರಾಜ ಛಬ್ಬಿ ಅವರೊಂದಿಗೆ ಪಕ್ಷದ ಗ್ರಾಮೀಣ ಪ್ರದೇಶದ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ,ಕಿರಣ ಪಾಟೀಲ,ಶಶಿಧರ ನಿಂಬಣ್ಣನವರ,ಕಲ್ಮೇಶ ಬೆಲೂರು,ಬಸವರಾಜ ಹೊನ್ನಳ್ಳಿ,ಆನಂದ ಕಲ್ಕಾಸ್ಕರ್,ಮಂಜು ಶೇರೆವಾಡ,ಕಲ್ಲಪ್ಪ ಹಟ್ಟಿ,ವೀರಭದ್ರ ಮನಗುಂಡಿ,ಪುಂಡಲೀಕ ಜಕ್ಕನ್ನವರ,ರವಿ,ಬಸಣ್ಣ ಗೊಂಡಗೋವಿ,ಮುತ್ತ ಬುಡ್ಡಿಕಾಯಿ,ಮದನ ಕುಲಕರ್ಣಿ,ಸೇರಿದಂತೆ ಹಲವರು ಉಪಸ್ಥಿತರಿದ್ದರು.