ಹುಬ್ಬಳ್ಳಿಯಲ್ಲಿ ಪಟಾಕಿ ಪುಲ್ಲ್ ಡಂ..ಡಂ..ಅಧಿಕಾರಿಗಳು ಠುಸ್ಸ್..ಠುಸ್ಸ್..ಗ್ರೀನೂ ಇಲ್ಲಾ..ರೆಡ್ಡೂ ಇಲ್ಲಾ..ಎಲ್ಲಾ ಗಾಂಧೀಜಿ…
ಹುಬ್ಬಳ್ಳಿ:-ಹುಬ್ಬಳ್ಳಿಯಲ್ಲಿ ಪಟಾಕಿ ವ್ಯಾಪಾರಿಗಳು ಎಷ್ಟು ಸ್ಟ್ರಾಂಗ್ ಅನ್ನೋದನ್ನು ನೋಡಬೇಕೆಂದರೆ ಹುಬ್ಬಳ್ಳಿಯ ನೆಹರು ಮೈದಾನಕ್ಕೆ ಒಂದ್ಸಲ ಬಂದು ನೋಡಿ..
ಪಟಾಕಿ ವ್ಯಾಪಾರಸ್ಥರು ನೆಹರು ಮೈದಾನದಲ್ಲಿ ಅವರು ಆಡಿದ್ದೇ ಆಟ ಎನ್ನುವಂತಾಗಿದೆ.ಜನರ ಜೀವದ ಜೊತೆ ಚೆಲ್ಲಾಟ ಆಡುವ ಅವರು ಪಟಾಕಿ ವ್ಯಾಪಾರಕ್ಕೆ ಫರ್ಮಿಶನ್ ತೆಗೆದುಕೊಳ್ಳುವಾಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಜೋನಲ್ ನಂಬರ -6 ರಲ್ಲಿ ಬಾಂಡ್ ಪೇಪರನಲ್ಲಿ ಬರೆದು ಕೊಟ್ಟಿದ್ದೇನು ಅವರು ಮಾಡತಿರುವುದು ಏನು ಅನ್ನೋದು ನೆಹರು ಮೈದಾನಕ್ಕೆ ಬಂದರೆ ಗೊತ್ತಾಗುತ್ತೇ.

ಪಟಾಕಿ ವ್ಯಾಪಾರಕ್ಕೆ ಫರ್ಮಿಶನ್ ತೆಗೆದುಕೊಳ್ಳುವಾಗ ಸಂಬಂಧಿಸಿದ ಅಧಿಕಾರಿಗಳಿಗೆ ಗಣೇಶನ ಪ್ರಸಾದವನ್ನು ಕವರ್ ನಲ್ಲಿ ಮುಟ್ಟಿಸಿ ಸಿದ್ಧಾರೂಢರ ಜಾತ್ರೆ ನಡೆಸಿ ಬಿಟ್ಟಿದ್ದಾರೆ.
ಪಾಲಿಕೆಯ ಜಾಗದಲ್ಲಿ ಫರ್ಮಿಶನ್ ಕೊಟ್ಟ ಜೋನಲ್ ಅಸಿಸ್ಟಂಟ್ ಕಮೀಷನರಗೆ ಅಲ್ಲಿ ಏನೇ ದುರ್ಘಟನೆ ನಡೆದರೂ ಅವರಿಗೆ ಸಂಬಂಧವಿಲ್ಲವಂತೆ.ಸಾಹೇಬ್ರೇ ಒಂದ್ಸಲ ನೀವು ಕೊಟ್ಟ ಫರ್ಮಿಶನ್ ಕಾಫಿ ಹಿಡಕೊಂಡು ನೆಹರು ಮೈದಾನಕ್ಕೆ ಭೇಟಿ ಕೊಟ್ಟರೆ ಗೊತ್ತಾಗುತ್ತೆ ಅಲ್ಲಿಯ ಅಸಲಿಯತ್ತ.
