ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದ್ದು ಸಾಕಷ್ಟು ಸಂಕಷ್ಟದಲ್ಲಿದ್ದಾರೆ. ಮತ್ತೊಂದು ಕಡೇ ವಿಜಯಲಕ್ಷ್ಮಿ ಹಾಗೂ ಇಡೀ ಕುಟುಂಬ ಜಾಮೀನು ಅರ್ಜಿ ಸಲ್ಲಿಸಲು ಓಡಾಡುತ್ತಿದೆ. ಇಂತಹ ಸಂದರ್ಭದಲ್ಲಿ ವಿಜಯಲಕ್ಷ್ಮಿ ಗೆಳತಿಯ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗೆಳತಿಯ ಬರ್ತ್‌ಡೇಯಲ್ಲಿ ಕೇಕ್ ಮಾಡಿರುವ ಫೋಟೋಗಳನ್ನು ಅವರೇ ಹಂಚಿಕೊಂಡಿದ್ದಾರೆ. ಶೃತಿ ರಮೇಶ್ ಕುಮಾರ್ ಎಂಬ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ಇರುವ ಫೋಟೋಗಳನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಫೋಟೋದಲ್ಲಿ ವಿಜಯಲಕ್ಷ್ಮಿ ಶುಭಕೋರಿರುವ ಫೋಟೋಗಳು ಕೂಡ ಇವೆ.
ಮೇಲ್ನೋಟಕ್ಕೆ ಶೃತಿ ರಮೇಶ್ ಕುಮಾರ್ ಉದ್ಯಮಿಯಂತೆ ಕಾಣುತ್ತಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಶೃತಿ ರಮೇಶ್ ಕುಮಾರ್ ಉತ್ತಮ ಬಾಂಧವ್ಯ ಹೊಂದಿದ್ದು, ಇತ್ತೀಚೆಗೆ ನಡೆದ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮಿ ಬಗ್ಗೆ ಚರ್ಚೆ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ವಿಜಯಲಕ್ಷ್ಮಿ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾಗುವ ಅಗತ್ಯವಿತ್ತಾ ಎಂದು ದರ್ಶನ್ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ವಿಜಯಲಕ್ಷ್ಮಿ ತಮ್ಮ ಗೆಳತಿಗೆ ಕೇಕ್ ತಿನ್ನಿಸುತ್ತಿರುವ ಫೋಟೋಗಳನ್ನು ವೈರಲ್ ಆಗುತ್ತಿವೆ. ಆ ಫೋಟೋಗಳನ್ನು ಗೆಳತಿ ಶೃತಿ ರಮೇಶ್ ಕುಮಾರ್ ಹಂಚಿಕೊಂಡಿದ್ದು, “ವಿಜಯಲಕ್ಮಿ ನೀವು ಹೃದಯವಂತರು. ನಿಮಗೆ ಹತ್ತಿರವಾಗಿದ್ದರು ಯಾವಾಗಲೂ ಖುಷಿಯಾಗಿ ಇರುವಂತೆ ಬಯಸುತ್ತೀರ. ನಾವು ನಮ್ಮ ಹಾದಿಯನ್ನು ದಾಟಿ ಒಳ್ಳೆಯ ಸ್ನೇಹಿತರಾಗಿದ್ದಕ್ಕೆ ಖುಷಿಯಾಗಿದ್ದೇನೆ. ನನ್ನ ಈ ದಿನವನ್ನು ವಿಶೇಷವಾಗಿಸುವುದಕ್ಕೆ ದೂರದಿಂದ ಬಂದು ವಿಶ್ ಮಾಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಸ್ನೇಹಿತೆಯನ್ನು ಪಡೆದಿದ್ದಕ್ಕೆ ಹೆಮ್ಮೆಯಾಗುತ್ತೆ ಎಂದು ಶೃತಿ ರಮೇಶ್ ಕುಮಾರ್ ಬರೆದುಕೊಂಡಿದ್ದಾರೆ.
ಆದರೆ, ಈ ಫೋಟೋಗಳು ವೈರಲ್ ಆಗುತ್ತಿದ್ದಂತೆ ವಿಜಯಲಕ್ಷ್ಮಿ ಬಗ್ಗೆ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಈ ಪಾರ್ಟಿ ಬೇಕಿತ್ತಾ., ದರ್ಶನ್ ಜೈಲಿನಲ್ಲಿ ವಿಲ ವಿಲ. ಇತ್ತ ವಿಜಯಲಕ್ಷ್ಮಿ ಪಾರ್ಟಿ, ಪ್ರಭಾವಿ ರಾಜಕಾರಣಿ ಸಂಬಂಧಿ ಜೊತೆ ಪಾರ್ಟಿ ಅಂತೆಲ್ಲ ಕಾಮೆಂಟ್ ಮಾಡಲಾಗುತ್ತಿದೆ. ಅಸಲಿಗೆ ಈ ಫೋಟೋ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗಬೇಕಿದೆ.