‘ಕನ್ನಡತಿ’ ಮೂಲಕ ಫೇಮಸ್ ಆದ ನಟ ಕಿರಣ್ ರಾಜ್ ಅವರಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ. ಕನ್ನಡತಿ ಮೂಲಕ ಇಡೀ ಕನ್ನಡಿಗರ ಮನೆ ಹಾಗೂ ಮನವನ್ನು ತಲುಪಿದ ನಟ ಕಿರಣ್ ರಾಜ್ ಸಿನಿಮಾ ರಿಲೀಸ್ ಆಗುತ್ತಿದೆ. ನಾಳೆ ರಾಜ್ಯಾದ್ಯಂತ ಬಹುನೀರಿಕ್ಷಿತ ಸಿನಿಮಾ ರಾನಿ ರಿಲೀಸ್ ಆಗುತ್ತಿದೆ. ಆದರೆ ಇದರ ಮಧ್ಯೆ ನಟ ಕಿರಣ್ ರಾಜ್ ಕಾರಿಗೆ ಅಪಘಾತವಾಗಿದೆ. ಕಿರಣ್ ರಾಜ್ಗೆ ಕೆಂಗೇರಿ ಬಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಪಾರಾಗಿದ್ದಾರೆ.
ಕಿರಣ್ ರಾಜ್ ಅವರು ಸದ್ಯ ಕಿರುತೆರೆಯಿಂದ ದೂರ ಇದ್ದಾರೆ. ಅವರು ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಸೆಪ್ಟೆಂಬರ್ 12ರಂದು ಅವರ ನಟನೆಯ ‘ರಾನಿ’ ಸಿನಿಮಾ ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಈ ರೀತಿಯ ದುರ್ಘಟನೆ ನಡೆದಿದೆ ಅನ್ನೋದು ಬೇಸರದ ವಿಚಾರ.
ಕಿರಣ್ ರಾಜ್ ಅವರು ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ ಕಿರುತೆರೆಯಲ್ಲೂ ನಟಿಸಿ ಗಮನ ಸೆಳೆದಿದ್ದಾರೆ. ಅವರು ಆ ಬಳಿಕ ಕನ್ನಡ ಕಿರುತೆರೆಗೆ ಮರಳಿದರು. ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಆಗಿ ಅವರು ಗಮನ ಸೆಳೆದರು. ಈ ಮೂಲಕ ಫೇಮಸ್ ಆದರು. ಈಗ ಅವರು ಹಿರಿತೆರೆಯಲ್ಲಿ ತೊಡಗಿಕೊಂಡಿದ್ದಾರೆ. ಅವರ ನಟನೆಯ ಸಿನಿಮಾಗಳು ರಿಲೀಸ್ ಆಗುತ್ತಿವೆ.