ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಕಾನೂನು ಕಂಟಕ ಶುರುವಾಗಿದೆ. ಹಾಗಾದರೆ ದರ್ಶನ್‌ಗೆ ಜಾಮೀನು ನೀಡದಂತೆ ತಡೆಯಲು ಇರುವ ಮೂರು ಅಸ್ತ್ರಗಳು ಯಾವುವು…
1. ಜೈಲಿನಲ್ಲಿ ರೌಡಿಗಳೊಂದಿಗೆ ಗುರುತಿಸಿಕೊಂಡ ದರ್ಶನ್
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳೊಂದಿಗೆ ಗುರುತಿಸಿಕೊಂಡ ದರ್ಶನ್ ಅವರನ್ನ ಸದ್ಯ ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಒಂದೆಡೆ ದರ್ಶನ್ ಪರ ವಕೀಲರು ಜಾಮೀನು ಪಡೆಯಲು ಪ್ಲ್ಯಾನ್ ನಡೆಸಿದ್ದಾರೆ. ಆದರೆ ದರ್ಶನ್ ಅವರಿಗೆ ಜಾಮೀನು ಸಿಗುವುದು ಸುಲಭವಿಲ್ಲ. ಯಾಕೆಂದರೆ ದರ್ಶನ್ ಅವರೇ ಜೈಲಿನಲ್ಲಿ ಅಂತಹ ಒಂದು ಸನ್ನಿವೇಶವನ್ನು ಸೃಷ್ಟಿಸಿಕೊಂಡಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳೊಂದಿಗೆ ದರ್ಶನ್ ಕಾಫಿ ಸಿಗರೇಟ್ ಶೇರ್ ಮಾಡಿಕೊಂಡಿರುವುದು ಆಪತ್ತು ತಂದುಕೊಂಡಿದೆ. ಈ ಒಂದು ಘಟನೆಯಿಂದಾಗಿ ದರ್ಶನ್ ಅವರಿಗೆ ಜಾಮೀನು ಕೈತಪ್ಪುವ ಸಾಧ್ಯತೆ ಇದೆ.
2. ಜೈಲಿನಿಂದ ಅಭಿಮಾನಿಗೆ ವಿಡಿಯೋ ಕರೆ
ದರ್ಶನ್ ಪರಪ್ಪನ ಅಗ್ರಹಾರ ಜೈಲಿನಿಂದ ತಮ್ಮ ಅಭಿಮಾನಿಗೆ ಕರೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆದ ಬಳಿಕೆ ಪೊಲೀಸರು ಎಚ್ಚತ್ತುಕೊಂಡು ಈ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಜೈಲಿನಲ್ಲಿ ಬೆಡ್ ಮೇಲೆ ಕುಳಿತುಕೊಂಡ ದರ್ಶನ್‌ಗೆ ಕೈದಿಯೊಬ್ಬ ಫೋನ್‌ನಲ್ಲಿ ವಿಡಿಯೋ ಕಾಲ್ ಮಾಡಿ ಅಭಿಮಾನಿಯೊಬ್ಬನಿಗೆ ಮಾತನಾಡಿಸುತ್ತಾನೆ.
ಹೀಗೆ ಜೈಲಿನಿಂದ ದರ್ಶನ್ ತನ್ನೊಂದಿಗೆ ಮಾತನಾಡಿದ್ದಾರೆಂದು ವ್ಯಕ್ತಿಯೊಬ್ಬ ಆ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದು ದರ್ಶನ್ ಅವರಿಗೆ ಕಾನೂನು ಕಂಟಕವನ್ನು ಹೆಚ್ಚಿಸಿದೆ. ಜೈಲಿನಲ್ಲಿ ಇರುವ ದರ್ಶನ್ ಹೊರಗಡೆ ಇರುವ ಅಭಿಮಾನಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದೂ ಕೂಡ ದರ್ಶನ್‌ಗೆ ಜಾಮೀನು ಕೈತಪ್ಪಲು ಒಂದು ಪ್ರಮುಖ ಕಾರಣವಾಗಬಹುದು.
3. ಅಸಭ್ಯ ಕೈ ಸನ್ನೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಜೈಲಿನಲ್ಲಿರುವ ದರ್ಶನ್, ಪವಿತ್ರಾ ಗೌಡ ಹಾಗೂ ಗ್ಯಾಂಗ್ ತನಿಖೆ ಪೂರ್ಣಗೊಳಿಸಿದ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ರೇಣುಕಾಸ್ವಾಮಿ ಕೊಲೆಯಲ್ಲಿ ದರ್ಶನ್ ಪಾತ್ರದ ಬಗ್ಗೆ ಮಾಧ್ಯಮದಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಅಷ್ಟೇ ಅಲ್ಲದೇ ರೇಣುಕಾಸ್ವಾಮಿ ಕೊಲೆಯಾದ ಬಳಿಕ ದರ್ಶನ್‌ನನ್ನು ವಶಕ್ಕೆ ಪಡೆದಾಗಿನಿಂದಲೂ ದರ್ಶನ್ ಕ್ರೂರ ಕೃತ್ಯವನ್ನು ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ.
ಸೆಪ್ಟೆಂಬರ್ 12ರಂದು ಚಾರ್ಜ್‌ಶೀಟ್ ಪ್ರತಿ ಸಮೇತ ವಕೀಲರ ಜೊತೆ ವಿಜಯಲಕ್ಷ್ಮಿ ಕುಟುಂಬ ಬಳ್ಳಾರಿ ಜೈಲಿಗೆ ಭೇಟಿ ನೀಡಿತ್ತು. ವಕೀಲರ ಜೊತೆ ಕಾನೂನು ಸಮರದ ಬಗ್ಗೆ ಚರ್ಚಿಸಿ ವಾಪಸ್ಸು ಶೆಲ್‌ಗೆ ಹೋಗುವಾಗ ಮಾಧ್ಯಮಕ್ಕೆ ಈ ಕಿಲ್ಲರ್ ಹೀರೋ ಅಸಭ್ಯ ಕೈ ಸನ್ನೆ ಮಾಡಿದ್ದಾನೆ. ಜೈಲಿನಲ್ಲಿದ್ದರೂ ದಾಸನ ಈ ಅಸಭ್ಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಈ ಮೂರು ಕಾರಣಗಳಿಗೆ ದರ್ಶನ್ ಜೈಲು ಕುಣಿಕೆ ಇನ್ನಷ್ಟು ಬಿಗಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.