ಅಮ್ಮನಿಗಾಗಿ ಕಾದು ಕೂತ “ಕಾಟೇರ”: ಕೊನೆಗೂ ಮಗನನ್ನು ನೋಡಲು ಜೈಲಿಗೆ ಬಂದ ಮೀನಾ ತೂಗುದೀಪ!

Share to all

ಬಳ್ಳಾರಿ: ದರ್ಶನ್ ಅವರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಸದ್ಯ ಅವರ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಆಗಿದೆ. ಜೈಲಿನಲ್ಲಿ ಸಖತ್ ಹಿಂಸೆ ಆಗುತ್ತಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಅದಲ್ಲದೆ ದರ್ಶನ್ ತಾಯಿ ಮೀನಾ ತೂಗುದೀಪ ಒಮ್ಮೆಯೂ ಮಗನನ್ನು ನೋಡಲು ಬಳ್ಳಾರಿ ಜೈಲಿಗೆ ಹೋಗಿರಲಲ್ಲ. ಇದರಿಂದ ಬೇಸರಗೊಂಡಿದ್ದ ದರ್ಶನ್ ತಾಯಿಯನ್ನು ನೋಡಬೇಕು ಎಂದು ಹಂಬಲಿಸಿದ್ದರು. ಇದೀಗ ಮಗನನ್ನು ನೋಡಲು ತಾಯಿ ಮೀನಾ ತೂಗುದೀಪ ಮಗಳ ಜೊತೆ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.

ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ದರ್ಶನ್ ನೋಡಲು ಮೀನಾ ಬಂದಿರಲಿಲ್ಲ. ಇದೀಗ ದರ್ಶನ್ ತಾಯಿ, ಸಹೋದರಿ ದಿವ್ಯಾ, ಬಾವ ಮಂಜುನಾಥ ಹಾಗೂ ಅಕ್ಕನ ಮಕ್ಕಳು ಆಗಮಿಸಿ ದರ್ಶನ್ ಕುಶಲೋಪರಿ ವಿಚಾರಿಸಿದ್ದಾರೆ. ದರ್ಶನ್​ ನೋಡಲು ಬಂದ ವೇಳೆ ತಾಯಿ ಮೀನು ತೂಗುದೀಪ ಮತ್ತು ಕುಟುಂಬಸ್ಥರು ಕೈಯಲ್ಲಿ ಎರಡು ಬ್ಯಾಗ್ ತಂದಿದ್ದಾರೆ. ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದಾರೆ. ಮಡದಿ ವಿಜಯಲಕ್ಷ್ಮೀ, ಸ್ನೇಹಿತರು ಈಗಾಗಲೇ ದರ್ಶನ್​​ರನ್ನು ಭೇಟಿ ಮಾಡಿದ್ದಾರೆ.

ಆದರೆ ಬೆಂಗಳೂರಿನಿಂದ ಬಳ್ಳಾರಿಗೆ 300ಕಿಮೀ ಅಂತರವಿರುವ ಕಾರಣ ತಾಯಿ ಮೀನಾ ತೂಗುದೀಪ್​ ದರ್ಶನ್​​ರನ್ನು ಭೇಟಿ ಮಾಡಿರಲಿಲ್ಲ. ಆದರಿಂದು ಬಳ್ಳಾರಿಗೆ ಆಗಮಿಸಿದ್ದಾರೆ. ಸಂದರ್ಶಕರ ಕೊಠಡಿಯಲ್ಲಿರುವ ತಾಯಿ ಮೀನಾ ದರ್ಶನ್ ಅಕ್ಕ, ಮಾವ, ಹಾಗೂ ಅಕ್ಕನ ಮಕ್ಕಳು ಇದ್ದರು. ಸಂದರ್ಶಕರ ಕೊಠಡಿಗೆ ಬಂದ ನಟ ದರ್ಶನ್ ತಾಯಿಯ ಕಂಡು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.

ಮಗನ ಸ್ಥಿತಿ ನೆನೆದು ಕಣ್ಣೀರು ಹಾಕಿದ ತಾಯಿ ಮೀನಾ ತೂಗುದೀಪ ಅವರು ಮಗನಿಗೆ ಸಾಂತ್ವನಿಸಿದ್ದಾರೆ ಎಂದು ಹೇಳಲಾಗಿದೆ. ಸಹೋದರನ ಸ್ಥಿತಿ ಕಂಡು ದರ್ಶನ್ ಅಕ್ಕ ಕೂಡಾ ಭಾವುಕರಾಗಿದ್ದಾರೆ ಎನ್ನಲಾಗಿದೆ. ದರ್ಶನ್ ಗೆ ಧೈರ್ಯ ತುಂಬಿದ ಅಕ್ಕ, ಭಾವ ಅವರೊಂದಿಗೆ ಮಾತನಾಡಿದ್ದಾರೆ. ಪುತ್ರ ದರ್ಶನ್ ಗೆ  ತಾಯಿ ಮೀನಾ ತೂಗುದೀಪ ಅವರು ಮಾನಸಿಕ ಧೈರ್ಯ ತುಂಬಿದ್ದಾರೆ.

 


Share to all

You May Also Like

More From Author