ಬಿಗ್ ಬಾಸ್ ಸೀಸನ್ ಆರಂಭಕ್ಕೆ ಕೌಂಟ್ ಡೌನ್: ಯಾರಿಗೆಲ್ಲಾ ಸಿಗಲಿದೆ ದೊಡ್ಮನೆ ಪ್ರವೇಶ!

Share to all

ಬಿಗ್​ಬಾಸ್​ಗೆ ಕೌಂಟ್ ಡೌನ್ ಶುರುವಾಗಿದ್ದು, ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅಂತ ವೀಕ್ಷಕರು ಕಾಯುತ್ತಿದ್ದಾರೆ. ಬಹುನಿರೀಕ್ಷಿತ ಕನ್ನಡದ ಬಿಗ್​ಬಾಸ್ 11 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೊಸ ಸೀಸನ್ ಪ್ರಾರಂಭಕ್ಕೆ ಬಿಗ್​ಬಾಸ್​ ತಂಡ ತೆರೆ ಮರೆ ಹಿಂದೆ ಎಲ್ಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಮೊನ್ನೆಯಷ್ಟೇ ಬಿಗ್​ಬಾಸ್​ ತಂಡ ಸುದ್ದಿಗೋಷ್ಠಿ ನಡೆಸಿ ದೊಡ್ಮನೆಗೆ ಬರೋ ಸ್ಪರ್ಧಿಗಳ ಬಗ್ಗೆ ಕೆಲವೊಂದು ವಿಚಾರದ ಕುರಿತು ಮಾಹಿತಿ ನೀಡಿದ್ದಾರೆ.

ಅದರಲ್ಲೂ ಈ ಸೀಸನ್​ ಹೊಸ ಅಧ್ಯಾಯ ಆಗಿರುವುದರಿಂದ ಹತ್ತಾರು ಬದಲಾವಣೆಗೆ ಸಿದ್ಧತೆ ನಡೆಸಲಾಗಿದೆ. ಇದರಲ್ಲಿ ಮುಖ್ಯವಾಗಿ ಶನಿವಾರ ನಡೆಯುತ್ತಿರೋ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್​ಬಾಸ್​ಗೆ ಬರೋ ಐದು ಸ್ಪರ್ಧಿಗಳ ಹೆಸರನ್ನು ರಿವೀಲ್​ ಮಾಡಲಿದ್ದಾರೆ. ಜೊತೆಗೆ ವೀಕ್ಷಕರು ವೋಟ್​ ಮಾಡುವ ಆಧಾರದ ಮೇಲೆ ಸ್ಪರ್ಧಿಗಳು ನರಕಕ್ಕೆ ಹೋಗ್ತಾರಾ ಅಥವಾ ಸ್ವರ್ಗಕ್ಕೆ ಹೋಗ್ತಾರಾ ಅಂತ ತಿಳಿದು ಬರಲಿದೆ. ಇನ್ನೂ ವೀಕ್ಷಕರು ಜಿಯೋ ಸಿನಿಮಾ ಅಪ್ಲಿಕೇಶನ್ ಮೂಲಕ ಸ್ಪರ್ಧಿಗಳ ಪರವಾಗಿ ವೋಟ್​ ಹಾಕಬಹುದಾಗಿದೆ.

ಈಗಾಗಲೇ ಬಿಗ್​ಬಾಸ್​ ಮೊದಲ ಸೀಸನ್​ನಿಂದ ಹಿಡಿದು ಹತ್ತು ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಪ್ರತಿ ಸೀಸನ್​ನಲ್ಲಿ ಭಿನ್ನ ವಿಭಿನ್ನವಾಗಿರೋ ಲೋಗೋಗಳು ಅನಾವರಣ ಆಗುತ್ತಲೇ ಇರುತ್ತೆ. ಆದರೆ ಈ ಬಾರಿಯ ಬಿಗ್​​ಬಾಸ್​ ಲೋಗೋದಲ್ಲಿ ಒಂದು ಕಡೆ ಬೆಂಕಿ, ಮತ್ತೊಂದು ಕಡೆ ನೀರು ಇದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಅಂದರೆ ಬಿಗ್​ಬಾಸ್ ಮನೆಯೊಳಗೆ ಸ್ಪರ್ಧಿಗಳ ಆಕ್ರೋಶ, ಜಗಳ, ಕಿತ್ತಾಟ, ಕಣ್ಣೀರು, ಭಾವನಾತ್ಮಕ ನಂಟಿನ ಸಾರವನ್ನು ಹೇಳ್ತಿದೆ. ​ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕೆಲವು ಸ್ಟಾರ್​ ನಟ, ನಟಿಯರು, ಸೋಷಿಯಲ್​ ಮೀಡಿಯಾ ಸ್ಟಾರ್​ಗಳ ಪಟ್ಟಿಗಳಲ್ಲಿ ಕೆಲವೊಂದು ಹೆಸರುಗಳು ಹರಿದಾಡುತ್ತಿವೆ. ಅವುಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಇನ್ನೂ ಕೆಲವೇ 3 ದಿನಗಳಲ್ಲಿ ಉತ್ತರ ಸಿಗಲಿದೆ.


Share to all

You May Also Like

More From Author