ಗ್ಯಾಸ್ ಸಿಲಿಂಡರ್ ಸೋರಿಕೆ ಹೊತ್ತಿ ಉರಿದ ಮನೆ.ತಪ್ಪಿದ ಬಾರೀ ಅನಾಹುತ.
ಹುಬ್ಬಳ್ಳಿ
ಹುಬ್ಬಳ್ಳಿಯ ಹಳೇಹುಬ್ಬಳ್ಳಿಯ ಜಂಗ್ಲಿಪೇಟದಲ್ಲಿರುವ ಸುಮಿತ್ರಮ್ಮಾ ಹೊಸೂರ ಎಂಬುವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆಗಿ ಮನೆಗೆ ಬೆಂಕಿ ಹತ್ತಿದ ಘಟನೆ ಜರುಗಿದೆ.
ಇಂದು ಮನೆಯಲ್ಲಿದ್ದ ಗ್ಯಾಸ ಸಿಲಿಂಡರ್ ಲೀಕೇಜ್ ಆಗಿದೆ.ಆದರೆ ಮನೆಯ ಯಜುಮಾನಿ ಸುಮಿತ್ರಮ್ಮಾ ಗ್ಯಾಸ್ ಹಚ್ಚಲು ಹೋದಾಗ ಗ್ಯಾಸ್ ಸೋರಿಕೆಯಾಗಿದ್ದರಿಂದ ಏಕಾ ಏಕಿ ಬೆಂಕಿ ಹೊತ್ತಿಕೊಂಡಿದೆ ತಕ್ಷಣ ಅಲ್ಲಿಂದ ಪರಾರಿಯಾದ ಮಹಿಳೆ ಕೂದಲೆಳೆ ಅಂತರದಿಂದ ಪಾರಾಗಿದ್ದಾಳೆ.ಮಹಿಳೆ ಚೀರಾಟ,ಕೂಗಾಟ ಮಾಡಿದಾಗ ಮನೆಯ ಆಜು ಬಾಜುದವರು ಬಂದು ಬೆಂಕಿ ನಂದಿಸುವಲ್ಲಿ ಪ್ರಯತ್ನ ಪಟ್ಟಿದ್ದಾರೆ ಜೊತೆಗೆ ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಆಗಬಹುದಾದ ಬಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಸಿಲಿಂಡರ್ ಸೋರಿಕೆಯಿಂದ ಮನೆಯ ಒಂದು ಭಾಗ ಸುಟ್ಟು ಕರಕಲಾಗಿದ್ದು ಉಳಿದಂತೆ ಯಾರಿಗೂ ಏನೂ ಆಗಿಲ್ಲಾ.
ಉದಯ ವಾರ್ತೆ ಹುಬ್ಬಳ್ಳಿ