ಟ್ಯೆಗರ್ ಉಗುರು ವಿಚಾರ ರಜತ ಉಳ್ಳಾಗಡ್ಡಿಮಠ ಮನೆಗೆ ಅರಣ್ಯ ಅಧಿಕಾರಿಗಳ ತಂಡ..

Share to all

ಹುಬ್ಬಳ್ಳಿ

ಹುಲಿ ಉಗುರಿನ‌ ಪೆಂಡೆಂಟ್ ವಿಚಾರ.ಕಾಂಗ್ರೆಸ್ ಮುಖಂಡ ಸಚಿವೆ ಲಕ್ಷ್ಮೀ‌ಹೆಬ್ಬಾಳಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ ಮನೆಗೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ಉದಯ ವಾರ್ತೆ ಹುಬ್ಬಳ್ಳಿಗೂ ಕಾಲಿಟ್ಟ ಹುಲಿ ಉಗುರು ಎಂದು ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಹುಲಿ ಉಗುರಿನ ಪೆಂಡೆಂಟ್ ಮಾದರಿಯ ಚೈನ್ ಧರಿಸಿದ್ಧ ರಜತ್ ಉಳ್ಳಾಗಡ್ಡಿಮಠ ಅವರ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯೆರಲ್ ಆಗಿತ್ತು.
ಈ ಹಿನ್ನೆಲೆ ರಜತ್ ಉಳ್ಳಾಗಡ್ಡಿಮಠ ಮನೆಗೆ ಆಗಮಿಸಿದ ಅರಣ್ಯ ಅಧಿಕಾರಿಗಳು ಹುಲಿ ಉಗುರಿನ‌ ಮಾದರಿ ಚೈನ್ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯ ದುರ್ಗದಬೈಲ್ ಬಳಿ ಇರುವ ರಜತ್ ಉಳ್ಳಾಗಡ್ಡಿಮಠ ಅವರ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಉದಯ ವಾರ್ತೆ ಹುಬ್ಬಳ್ಳಿ.


Share to all

You May Also Like

More From Author