ಶೋ ಬಗ್ಗೆ ಗೌರವ ಇಲ್ಲದವರನ್ನು ಯಾಕೆ ಕರೆಸುತ್ತೀರಾ!? ಎಂದು ರೀಲ್ಸ್ ಸ್ಟಾರ್ ವೇದಿಕೆಗೆ ಎಂಟ್ರಿ ಆಗ್ತಿದ್ದಂಗೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ. ರೀಲ್ಸ್ ಸ್ಟಾರ್ ಹಾಗೂ ಕಾಮಿಡಿ ಕಲಾವಿದ ಧನರಾಜ್ ಆಚಾರ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವೇಳೆ ಸುದೀಪ್ ಗರಂ ಆಗಿದ್ದಾರೆ.
ಅಷ್ಟಕ್ಕೂ ಸುದೀಪ್ ಗರಂ ಆಗಲು ಕಾರಣ ಏನು ಗೊತ್ತಾ!? ಈ ಸುದ್ದಿ ಕಂಪ್ಲೀಟಾಗಿ ಓದಿ. ಎಸ್, ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡಾಗಿ ಓಪನಿಂಗ್ ಪಡೆದಿದೆ. ಈ ವೇಳೆ ಕಾಮಿಡಿ ಹಾಗೂ ರೀಲ್ಸ್ ಸ್ಟಾರ್ ಧನರಾಜ್ ಆಚಾರ್ ವೇದಿಕೆ ಮೇಲೆ ಬರುತ್ತಿದ್ದಂತೆ ಕಿಚ್ಚ ಗರಂ ಆಗಿದ್ದಾರೆ.
ಹಿಂದೆ ಬಿಗ್ ಬಾಸ್’ ಬಗ್ಗೆ, ಧನರಾಜ್ ಅವರು ಒಂದು ವಿಡಿಯೋ ಮಾಡಿದ್ದರು. ಜಗಳ ನಡೆಯೋದು ಟಿಆರ್‌ಪಿಗಾಗಿ ಎಂದು ಅವರು ಹೇಳಿದ್ದರು. ಈ ವಿಡಿಯೋನ ಬಿಗ್‌ಬಾಸ್ ವೇದಿಕೆಯ ಮೇಲೆ ಪ್ಲೇ ಮಾಡಲಾಯಿತು. ಆ ಬಳಿಕ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು.
ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಡ್ತಾ ಇದೀನಾ? ಜಗಳ ಮಾಡೋದು ಟಿಆರ್‌ಪಿಗಾ? ನಾನು ನೋಡದನ್ನು ಬದಲಾಯಿಸಿಕೊಳ್ಳೋಕೆ ಆಗಲ್ಲ. ಬಿಗ್‌ಬಾಸ್ ಮೇಲೆ ಗೌರವ ಇಲ್ಲದ ವ್ಯಕ್ತಿನ ಏಕೆ ಕಳುಹಿಸುತ್ತಿದ್ದೀರಿ” ಎಂದು ಸುದೀಪ್ ಪ್ರಶ್ನೆ ಮಾಡಿದರು. ನಾನು ಮಾಡಿರೋದು ತಮಾಷೆಗೆ ಇದನ್ನು ಗಂಭೀರವಾಗಿ ಸ್ವೀಕರಿಸಬೇಡಿ’ ಎಂದು ಧನರಾಜ್ ಕೇಳಿಕೊಂಡರು.
ಆ ಬಳಿಕ ಸುದೀಪ್ ನಮಗೂ ರೀಲ್ಸ್ ಮಾಡೋಕೆ ಬರುತ್ತೇರಿ ಎಂದು ಜೋರಾಗಿ ನಕ್ಕರು. ಆಗ ಧನರಾಜ್ ನಿಟ್ಟುಸಿರು ಬಿಟ್ಟರು. ಒಂದು ಕಡೆಯಿಂದ ಧನರಾಜ್ ಪತ್ನಿ ಅವರ ಪ್ರಶ್ನೆ ಹಾಗೂ ಸುದೀಪ್ ಅವರ ವರ್ತನೆಯನ್ನು ಕಂಡು ಜೋರಾಗಿ ಅಳಲು ಆರಂಭಿಸಿದರು. ನಂತರ ಇದು ತಮಾಷೆಗಾಗಿ ಎಂದು ಅವರಿಗೆ ತಿಳಿಯಿತು
ಧನರಾಜ್‌ಗೆ ಮಗು ಜನಿಸಿ ಇನ್ನೂ ಒಂದು ತಿಂಗಳೂ ಆಗಿಲ್ಲ. ಮಗು ಜನಿಸಿದ ಕೂಡಲೇ ಅವರು ಆಸ್ಪತ್ರೆಯಲ್ಲಿ ಇರುವಾಗಲೇ ಬಿಗ್‌ಬಾಸ್ ನಿಂದ ಆಫರ್ ಬಂದಿತ್ತು. ಮೊದಲಿಗೆ ಹೋಗುವುದೋ ಬೇಡವೋ ಎಂದುಕೊಂಡರು. ನಂತರ ಮಗಳ ಹುಟ್ಟಿದ ನಂತರ ಹೊಸ ಅವಕಾಶ ಸಿಕ್ಕಿದೆ. ಅವಳಿಗೋಸ್ಕರ ನಾನು ಬಿಗ್‌ಬಾಸ್ ಗೆ ಹೋಗುತ್ತೇನೆ ಎಂದರು. ಹೀಗಾಗಿ, ಇದಕ್ಕೆ ಒಪ್ಪಿಕೊಂಡರು. ನಂತರ ಒಂದು ತಿಂಗಳ ಮಗುವಿನ ಮುಖ ನೋಡಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು.