ಹುಬ್ಬಳ್ಳಿ
ಹುಲಿ ಉಗುರಿನ ಪೆಂಡೆಂಟ್ ವಿಚಾರ
ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಅರಣ್ಯ ಅಧಿಕಾರಿಗಳು
ಪರಿಶೀಲನೆ ನೀಡಿದ ನಂತರ ಹೇಳಿಕೆ ನೀಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್.
ರಜತ್ ಅವರ ಬಳಿ ಇರೋ ಪೆಂಡೆಂಟ್ ಮಾದರಿ ಚೈನ್ ಪರಿಶೀಲನೆ ಮಾಡಿದ್ದೇವೆ
ಈಗಾಗಲೇ ಆ ಪೆಂಡೆಂಟ್ ವಶಕ್ಕೆ ತೆಗೆದುಕೊಂಡಿದ್ದೇವೆ
ಹೆಚ್ಚಿನ ತನಿಖೆಗಾಗಿ ಈ ಉಗುರನ್ನ FSIL ಪ್ರಯೋಗಾಲಯಕ್ಕೆ ಕಳಿಸಲಾಗುವುದು
ಪ್ರಯೋಗಾಲಯದಿಂದ ವರದಿ ಬಂದ ನಂತರ ಈ ಕುರಿತು ಸ್ಪಷ್ಟವಾಗಲಿದೆ
ಈ ಬಗ್ಗೆ ವರದಿ ಬರೋಕೆ ಒಂದು ತಿಂಗಳು ಅವಧಿ ಬೇಕಾಗುತ್ತೆ
ಒಂದು ವೇಳೆ ಅದು ನಿಜವಾದ ಹುಲಿ ಉಗುರಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಅಲ್ಲಿಯವರೆಗೂ ತನಿಖೆಗೆ ಸಹಕಾರ ನೀಡುವಂತೆ ರಜತ್ ಉಳ್ಳಾಗಡ್ಡಿಮಠ ಅವರಿಗೆ ಸೂಚಿಸಿದ್ದೇವೆ
ಪರಿಶೀಲನೆ ನಂತರ ಹೇಳಿಕೆ ನೀಡಿದ ಸಹಾಯಕಅರಣ್ಯ ಸಂರಕ್ಷಣಾಧಿಕಾರಿ ಪರಿಮಳ ವಿ.ಎಚ್.
ಉದಯ ವಾರ್ತೆ ಹುಬ್ಬಳ್ಳಿ