‘ಬಿಗ್ ಬಾಸ್’ ಮನೆಯಲ್ಲಿ 17 ಸ್ಪರ್ಧಿಗಳು ಎಂಟ್ರಿ ಪಡೆದಿದ್ದಾರೆ. ಅನುಷಾ ರೈ, ಧರ್ಮಕೀರ್ತಿರಾಜ್, ಲಾಯರ್ ಜಗದೀಶ್, ಭವ್ಯಾ ಗೌಡ, ಯಮುನಾ ಶ್ರೀನಿಧಿ, ಧನರಾಜ್ ಆಚಾರ್, ಗೌತಮಿ ಜಾಧವ್, ಶಿಶಿರ್, ತ್ರಿವಿಕ್ರಂ, ಹಂಸ, ಮಾನಸಾ, ಗೋಲ್ಡ್ ಸುರೇಶ್, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ್, ಉಗ್ರಂ ಮಂಜು, ರಂಜಿತ್ ಕುಮಾರ್, ಮೋಕ್ಷಿತಾ ಪೈ, ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಇದರಲ್ಲಿ ಒಂದಷ್ಟು ಮಂದಿ ಸ್ವರ್ಗದಲ್ಲಿ ಹಾಯಾಗಿದ್ದರೆ, ಒಂದಷ್ಟು ಮಂದಿ ನರಕದಲ್ಲಿ ಇದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ 4 ದಿನ ಕಳೆದಿದೆ. ಪರಿಚಯ, ಹರಟೆ ಜೊತೆಗೆ ಕಳೆಯುತ್ತಿದ್ದ ಸ್ಪರ್ಧಿಗಳ ನಡುವೆ ಜಗಳ, ಮನಸ್ತಾಪವು ಪ್ರಾರಂಭವಾಗುತ್ತಿದೆ. ಅದರ ಜೊತೆಗೆ ನರಕವಾಸಿಯಾದ ರಂಜಿತ್ ಹಾಗೂ ಐಶ್ವರ್ಯಾ ನಡುವೆ ಆತ್ಮೀಯ ಬಾಂಡಿಂಗ್ ಒಂದು ಬಿಲ್ಡ್ ಆಗುತ್ತಿರುವುದು ಮನೆಯವರ ಗಮನಕ್ಕೆ ಮತ್ತು ನೋಡುಗರ ಗಮನಕ್ಕೆ ಬರುತ್ತಿದೆ. ಅದಕ್ಕೆ ಕೆಲವು ಸಾಕ್ಷಿಗಳು ಸಹ ನಿನ್ನೆ ಸಿಕ್ಕಿವೆ.
ನಿನ್ನೆ ಬೆಳಿಗ್ಗೆ ಸ್ವರ್ಗವಾಸಿಯಾದ ಐಶ್ವರ್ಯಾ ಸಿಂಧೋಗಿ, ತಿಂಡಿ ತಿನ್ನುತ್ತಾ ನರಕದ ಬಳಿ ಹೋದರು. ಅವರನ್ನು ನೋಡಿದ ರಂಜಿತ್, ವಾವ್ ಎಂದೇನೋ ಪ್ರತಿಕ್ರಿಯೆ ನೀಡಿದರು. ಅದಕ್ಕೆ ಐಶ್ವರ್ಯಾ, ‘ನೀವು ನನ್ನನ್ನು ನೋಡಿ ಹೇಳಿದ್ದಾ? ಅಥವಾ ನನ್ನ ತಟ್ಟೆ ನೋಡಿ ಹೇಳಿದ್ದಾ?’ ಎಂದು ಕೇಳಿದರು. ಅದಕ್ಕೆ ರಂಜಿತ್, ‘ಪ್ಲೇಟ್ಗಿಂತಲೂ ನೀವೇ ಚೆನ್ನಾಗಿದ್ದೀರ’ ಎಂದರು. ಇದು ಐಶ್ವರ್ಯಾ ಸಣ್ಣಗೆ ನಾಚುವಂತೆ ಮಾಡಿತು. ಬಳಿಕ ಐಶ್ವರ್ಯಾ, ‘ನಿಮಗೆ ನಾನು ಬೇಕಾ, ಪ್ಲೇಟ್ ಬೇಕಾ?’ ಎಂದು ಕೇಳಿದ್ದಾರೆ. ಅದಕ್ಕೆ ರಂಜಿತ್, ‘ನೀವೇ ಬೇಕು’ ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿಸಿಕೊಂಡ ಮಾನಸಾ ಓಹ್ ಎಂದು ಉದ್ಘಾರ ಸಹ ತೆಗೆದರು.
ಮತ್ತೆ ರಾತ್ರಿ ಸಮಯದಲ್ಲಿ ಐಶ್ವರ್ಯಾ, ನರಕದ ಕಡೆಗೆ ಬಂದಾಗಲೂ ಸಹ ಇದೇ ವಿಷಯ ಚರ್ಚೆ ಆಗಿದೆ. ಅದೇ ಸಮಯದಲ್ಲಿ ಅಲ್ಲಿಗೆ ಬಂದ ಉಗ್ರಂ ಮಂಜು, ಧಮ್ ಇದ್ದರೆ ಇವಳನ್ನು ಮುಟ್ಟು ನೋಡೋಣ ಎಂದು ಸವಾಲು ಹಾಕಿದ್ದಾರೆ, ಆಗ ರಂಜಿತ್ ‘ಮನಸ್ಸು ಮಾಡಿದರೆ ಎತ್ತಾಕೊಂಡು ಹೋಗ್ತೀನಿ’ ಎಂದು ಪ್ರತಿಕ್ರಿಯೆ ಕೊಟ್ಟರು, ಇದನ್ನು ಕೇಳಿದ ಐಶ್ವರ್ಯಾ ಹುಸಿ ಕೋಪ ತೋರುತ್ತಾ ಅಲ್ಲಿಂದ ಎದ್ದು ಹೋದರು.
ಒಟ್ಟಾರೆಯಾಗಿ ಬಿಗ್ಬಾಸ್ ಮನೆಯಲ್ಲಿ ಜಗಳ ಸಾಮಾನ್ಯ ಸಹ. ಆದರೆ ಜಗಳದ ಜೊತೆಗೆ ಪ್ರೀತಿ-ಪ್ರೇಮವೂ ಸಹ ಸಾಮಾನ್ಯವೇ. ಪ್ರತಿ ಸೀಸನ್ನಲ್ಲೂ ಯಾವುದಾದರೂ ಒಂದು ಯುವ ಜೋಡಿ ಜಂಟಿಯಾಗುತ್ತದೆ. ಕನಿಷ್ಟ ಪಕ್ಷ ಸೀಸನ್ ಮುಗಿಯುವವರೆಗಾದರೂ ಒಟ್ಟಿಗೆ ಇದ್ದು ಮನೊರಂಜನೆ ನೀಡುತ್ತಾರೆ. ಕೆಲವು ಬಾರಿ ಶೋ ಮುಗಿದ ಬಳಿಕವೂ ಜೊತೆಗಿರುವ ಉದಾಹರಣೆಗಳು ಇವೆ.